ಧರ್ಮಕ್ಕಿಂತ ಶ್ರಧ್ಧೆ ಮತ್ತು ಭಕ್ತಿ ಮುಖ್ಯವಾಗಿದೆ

ಕಿನ್ನಿಗೋಳಿ: ಧರ್ಮಕ್ಕಿಂತ ಶ್ರಧ್ಧೆ ಮತ್ತು ಭಕ್ತಿ ಮುಖ್ಯವಾಗಿದೆ. ಪ್ರತಿ ಮನೆ ಮನೆಗಳಲ್ಲಿ ಶಿಸ್ತು ಸಂಸ್ಕೃತಿಯ ಜೊತೆಗೆ ಅಧ್ಯಾತ್ಮಿಕದ ತಿಳುವಳಿಕೆಯ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ ಎಂದು ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
ಸೋಮವಾರ ಕಿನ್ನಿಗೋಳಿ ಯುಗಪುರುಷ ವಲಯದ ಶ್ರೀ ಮದ್ಗುರು ರಾಘವೇಂದ್ರ ಸ್ವಾಮಿ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜ್ಯೋತಿಷಿ ಮೋಹನದಾಸ ಸುರತ್ಕಲ್ ಧಾರ್ಮಿಕ ಪ್ರವಚನ ನೀಡಿದರು. ಹಿರಿಯ ಸಾಹಿತಿ ಕೆ.ಜಿ. ಮಲ್ಯ, ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಅರುಣಾ ಪ್ರಮೋದ್, ದೇವಳದ ಅರ್ಚಕ ರಾಘವೇಂದ್ರ, ಪ್ರಮೋದ್ ಉಪಸ್ಥಿತರಿದ್ದರು.

Kinnigoli-12081408

Comments

comments

Comments are closed.

Read previous post:
Kinnigoli-12081407
ಕೊಡೆತ್ತೂರು ನವರಾತ್ರಿ ಉತ್ಸವ ಪತ್ರಿಕೆ ಬಿಡುಗಡೆ

ಕಿನ್ನಿಗೋಳಿ: 50ನೇ ವರ್ಷದ ಕೊಡೆತ್ತೂರು ನವರಾತ್ರಿ ಉತ್ಸವದ ಮೆರವಣಿಗೆಯ ಆಮಂತ್ರಣ ಪತ್ರಿಕೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ಸನ್ನಿದಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿದರು. ಈ ಸಂದರ್ಭ ಕಟೀಲು...

Close