ಕಟೀಲು ವಿದ್ಯಾ ಸಂಸ್ಥೆಗಳ ಧ್ವಜಾರೋಹಣ

ಕಿನ್ನಿಗೋಳಿ: ಅಭಿವೃದ್ಧಿ ಪರ ದೇಶ ಕಟ್ಟುವ ಕಾಯಕ ಯುವ ಪೀಳಿಗೆಯಿಂದ ಆಗಬೇಕಾಗಿದೆ ಎಂದು ಹ್ಯಾಂಗ್ಯೋ ಐಸ್ ಕ್ರೀಂ ಪ್ರೈವೆಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಪೈ ಹೇಳಿದರು.

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತಕ್ಕೆ ಒಳಪಟ್ಟ ಎಲ್ಲಾ ವಿದ್ಯಾ ಸಂಸ್ಥೆಗಳ 3 ಸಾವಿರ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಮಾತನಾಡಿದರು.
ಪತ್ರಕರ್ತ ಜಿತೇಂದ್ರ ಕುಂದೇಶ್ವರ, ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಸಂಸ್ಕೃತ ಅಧ್ಯಯನ ಕೇಂದ್ರದ ಪದ್ಮನಾಭ ಮರಾಠೆ, ಪದವಿ ಕಾಲೇಜಿನ ಎಂ.ಬಾಲಕೃಷ್ಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಜಯರಾಮ ಪೂಂಜ, ಪ್ರೌಢ ಶಾಲೆಯ ಕೆ.ವಿ.ಶೆಟ್ಟಿ, ಪ್ರಾಥಮಿಕ ಶಾಲೆಯ ವೈ ಮಾಲತಿ ಮತ್ತಿತರ ರು ಉಪಸ್ಥಿತರಿದ್ದರು.

Kinnigoli-15081405 Kinnigoli-15081404Kinnigoli-15081406

Comments

comments

Comments are closed.

Read previous post:
Kinnigoli-15081402
ಯಸ್. ಕೋಡಿ ಬಸ್ಸು ತಂಗುದಾಣ ಉದ್ಘಾಟನೆ

ಕಿನ್ನಿಗೋಳಿ: ಮಿತ್ರ ಬಳಗ ಯಸ್. ಕೋಡಿ ನೇತ್ರತ್ವದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಡಾ. ಸಂಜೀವನಾಥ್ ಐಕಳ ಇವರ ಸಂಸ್ಮರಣಾರ್ಥ ಯಸ್. ಕೋಡಿಯಲ್ಲಿ ನಿರ್ಮಿಸಿರುವ ನೂತನ ಬಸ್ಸು...

Close