ಯಸ್. ಕೋಡಿ ಬಸ್ಸು ತಂಗುದಾಣ ಉದ್ಘಾಟನೆ

ಕಿನ್ನಿಗೋಳಿ: ಮಿತ್ರ ಬಳಗ ಯಸ್. ಕೋಡಿ ನೇತ್ರತ್ವದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿ. ಡಾ. ಸಂಜೀವನಾಥ್ ಐಕಳ ಇವರ ಸಂಸ್ಮರಣಾರ್ಥ ಯಸ್. ಕೋಡಿಯಲ್ಲಿ ನಿರ್ಮಿಸಿರುವ ನೂತನ ಬಸ್ಸು ತಂಗುದಾಣವನ್ನು ಸಂಜೀವನಾಥ್ ಐಕಳ ಅವರ ಪುತ್ರ, ಪುನರೂರು ಭಾರತ ಮಾತ ಪ್ರೌಢ ಶಾಲಾ ಸಂಚಾಲಕರಾದ ವಿನೋಭನಾಥ ಐಕಳ ಉದ್ಘಾಟಿಸಿದರು. ಈ ಸಂದರ್ಭ ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ, ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ಕರ್ನಾಟಕ ಕಿಸಾನ್ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಗುರುರಾಜ್ ಯಸ್. ಪೂಜಾರಿ, ಯುಗಪುರುಷದ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಪಂ. ಸದಸ್ಯ ಆನಂದ ಗೌಡ, ಮಿತ್ರ ಬಳಗದ ಅಧ್ಯಕ್ಷ ರವಿರಾಜ್, ರಾಘವೇಂದ್ರ ರಾವ್, ಸಿಸಿಲಿಯಾ ಕ್ಯಾಸ್ತಲಿನೋ, ಶಶಿ ಸುರೇಶ್, ಸತೀಶ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-15081401 Kinnigoli-15081402 Kinnigoli-15081403

Comments

comments

Comments are closed.

Read previous post:
Kinnigoli-14081404
ಹಾವಿನ ಹೆಡೆಯಾಕಾರದ ಪತಂಗ

ಕಟೀಲು ಉಲ್ಲಂಜೆ ಸಮೀಪ ಸಿಕ್ಕ ಹಾವಿನ ಹೆಡೆಯಾಕಾರದ ರೆಕ್ಕೆಗಳುಳ್ಳ ಪತಂಗ Photo : Arun Ullanje

Close