ಕಿರೆಂ ಕೊಂಕಣಿ ಭಾಷಾ ಮಾನ್ಯತಾ ದಿವಸ

ಕಿನ್ನಿಗೋಳಿ: ಭಾಷಾಭಿಮಾನವಿದ್ದಲ್ಲಿ ಭಾಷಾಭಿವೃದ್ಧಿ ಸಾಧ್ಯ. ಮುಂದಿನ ಪೀಳಿಗೆಗೆ ಕೊಂಕಣಿ ಭಾಷೆ ಉಳಿಸುವುದು ಸವಾಲಾಗಿದೆ. ಭಾಷೆ ಉಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಎಂದು ಕಿರೆಂ ಚರ್ಚ್ ಧರ್ಮಗುರು ಫಾ| ಪಾವ್ಲ್ ಪಿಂಟೋ ಹೇಳಿದರು.
ಕಿರೆಂ ಚರ್ಚ್‌ನ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಕಿರೆಂ ಚರ್ಚ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೊಂಕಣಿ ಭಾಷಾ ಮಾನ್ಯತಾ ದಿವಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಲಿಯಾಸ್ ಸಾಂಕ್ತಿಸ್, ಸಂತಾನ್ ಡಿ’ಸೋಜ, ಚರ್ಚ್ ಉಪಾಧ್ಯಕ್ಷ ಮ್ಯಾಕ್ಸಿ ಪಿಂಟೊ, ಸಿರಿಲ್ ಮಸ್ಕರೇನ್ಹಸ್, ಫಾ| ಜೆರೊಮ್ ಡಿ;ಸೋಜ, ಕಾರ್ಯದರ್ಶಿ ಅನಿತಾ ಡಿ’ಸೋಜ ಉಪಸ್ಥಿತರಿದ್ದರು.
ಕಥೋಲಿಕ್ ಸಭಾ ಸಂಘಟನೆಯ ಪರವಾಗಿ ಧರ್ಮಕೇಂದ್ರದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎವ್ಜಿನ್ ಸಲ್ಡಾನ್ಹಾ ವಂದಿಸಿದರು, ಸುನಿತಾ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli-17081409 Kinnigoli-17081410

Comments

comments

Comments are closed.

Read previous post:
Kinnigoli-17081408
ಯಕ್ಷಲಹರಿ ರಜತ ಮಹೋತ್ಸವ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿಯಲ್ಲಿ ಯಕ್ಷಗಾನದ ಚಟುವಟಿಗೆಗಳಿಂದ ಕ್ರಿಯಾಶೀಲವಾದ ಯಕ್ಷಲಹರಿಯ ರಜತ ಮಹೋತ್ಸವ ವರ್ಷಾಚರಣೆಯನ್ನು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣರ ಉಪಸ್ಥಿತಿಯಲ್ಲಿ ಉದ್ಘಾಟಿಸಿಲಾಯಿತು. ಯಕ್ಷಲಹರಿಯ...

Close