ಜ್ಯೋತಿ ಮಹಿಳಾ ಮಂಡಲದ ಆಟಿದ ಕೂಟ

ಮೂಲ್ಕಿ: ಆಟಿ ಆಚರಣೆಗಳು ಸಾಂಪ್ರದಾಯಿಕವಾಗಿ ಹಿಂದಿನ ತಿಳುವಳಿಕೆಗಳನ್ನು ಯುವ ಪೀಳಿಗೆಗೆ ತಿಳಿಸಲು ಸಮಾಜ ಸೇವಾ ಸಂಸ್ಥೆಗಳು ಮಾಡುವ ಕಾರ್ಯ ಸ್ತುತ್ಯರ್ಹ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಕೆಮ್ರಾಲ್ ಒಕ್ಕೂಟದ ಅಧ್ಯಕ್ಷ ಶಶಿ ಸುರೇಶ್ ಹೇಳಿದರು. ಪಂಜ ಕೊಕುಡೆ ನವಜ್ಯೋತಿ ಮಹಿಳಾ ಮಂಡಲ ವತಿಯಿಂದ ನಡೆದ ಆಟಿದ ಕೂಟದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಹಿಳಾ ಮಂಡಲದ ಸದಸ್ಯರು ಚೆನ್ನೆ ಮಣೆ ಆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಶಾರದಾ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಆಟಿ ಖಾದ್ಯಗಳ ಬಗ್ಗೆ ಪರಿಚಯಿಸಿದರು. ಅಮಿತಾ ದೇವಾಡಿಗ, ಪ್ರೇಮ ಶೆಡ್ತಿ, ವನಿತಾ ತೋಕೂರು ಉಪಸ್ಥಿತರಿದ್ದರು.
ತಾರಾ ಬಿ ಶೆಟ್ಟಿ ಸ್ವಾಗತಿಸಿದರು. ಶೈಲಾ ಎನ್. ಶೆಟ್ಟಿ ನಿರೂಪಿಸಿದರು. ಅಮಿತಾ ವಂದಿಸಿದರು.

Kinnigoli-17081407

 

Comments

comments

Comments are closed.

Read previous post:
Kinnigoli-17081404
ತೋಕೂರು 68ನೇ ಸ್ವಾತಂತ್ರ್ಯೋತ್ಸವ

ಮುಲ್ಕಿ:  ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ , ತೋಕೂರು ಇದರ ಎನ್.ಎಸ್.ಎಸ್. ಘಟಕ ಮತ್ತು ರೋವರ‍್ಸ್ ಘಟಕಗಳ ಜಂಟೀ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ದಿನಾಚರಣೆಯನ್ನು ಸಂಸ್ಥೆಯ...

Close