ತೋಕೂರು 68ನೇ ಸ್ವಾತಂತ್ರ್ಯೋತ್ಸವ

ಮುಲ್ಕಿ:  ರಾಮಕೃಷ್ಣ ಪೂಂಜ ಕೈಗಾರಿಕಾ ತರಬೇತಿ ಸಂಸ್ಥೆ, ತಪೋವನ , ತೋಕೂರು ಇದರ ಎನ್.ಎಸ್.ಎಸ್. ಘಟಕ ಮತ್ತು ರೋವರ‍್ಸ್ ಘಟಕಗಳ ಜಂಟೀ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ದಿನಾಚರಣೆಯನ್ನು ಸಂಸ್ಥೆಯ ಆವರಣದಲ್ಲಿ ಆಚರಿಸಲಾಯಿತು. ಡೇವಿಡ್ ನೆಮಿಕ್ ಅಲ್ಮೇಡಾ , ನಿವೃತ್ತ ಏರ್ಫೋರ್ಸ್ ಸ್ಕ್ವಾಡ್ರಾನ್ ಲೀಡರ್ ಧ್ವಜಾರೋಹಣ ಗೈದರು.

ಭಾರತೀಯ ಸಂಸ್ಕೃತಿಯು ಅಮೂಲ್ಯವಾದುದು, ಅದನ್ನು ರಕ್ಷಿಸಿ ಪೋಷಿಸುವ ಕೆಲಸವು ವಿದ್ಯಾರ್ಥಿಗಳಾದ್ದಗಿರುತ್ತದೆ. ಮಾತೃ ಭೂಮಿಯ ಕೆಲಸವು ಯಾವಾಗಲೂ ಬಂದರೂ ವಿದ್ಯಾರ್ಥಿಗಳಾದ ನಿವೇಲ್ಲರೂ ಕಟೀಬದ್ದರಾಗಿರಬೇಕೆಂದು ಕರೆಯಿತ್ತರು. ಈ ಸಂದರ್ಭದಲ್ಲಿ ಡೇವಿಡ್ ನೆಮಿಕ್ ಅಲ್ಮೇಡಾ , ನಿವೃತ್ತ ಏರ್ಫೋರ್ಸ್ ಸ್ಕ್ವಾಡ್ರಾನ್ ಲೀಡರ್ ರವನ್ನು ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು.
ರಘುರಾಮ್ ರಾವ್, ದಯಾನಂದ ಲಾಗ್ವಾಣ್ಕರ್, ವಿಶ್ವನಾಥ್ ರಾವ್, ಸಂಸ್ಥೆಯ ಪ್ರಾಚಾರ್ಯ ವೈ.ಎನ್. ಸಾಲಿಯಾನ್, ಮತ್ತಿತರರು ಉಪಸ್ಥಿತರಿದ್ದರು.
ಲಕ್ಷ್ಮೀಕಾಂತ ನಿರೂಪಿಸಿ, ಸುರೇಶ್ ಎಸ್. ಧನ್ಯವಾದ ನೀಡಿದರು.

Kinnigoli-17081404 Kinnigoli-17081405 Kinnigoli-17081406

Comments

comments

Comments are closed.

Read previous post:
Kinnigoli-17081402
ಅಂಗರಗುಡ್ಡೆ-ಸಮಾಜ ಸೇವೆ ಮೂಲಕ ಸ್ವಾತಂತ್ರ್ಯ ಆಚರಣೆ

ಮೂಲ್ಕಿ: ದೇಶದೆಲ್ಲೆಡೆ ಶುಕ್ರವಾರ ೬೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅಲ್ಲಲ್ಲಿ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಮಾಡಿ, ವಂದೇಮಾತರಂ ಹಾಡಿ, ಸಂಭ್ರಮ ಸಡಗರದಲ್ಲಿ ಆಚರಣೆ ನಡೆಸಿ, ಜನಗಣಮನದ ರಾಷ್ಟ್ರಗೀತೆಯೊಂದಿಗೆ ಮಂಗಳ...

Close