ಕಿನ್ನಿಗೋಳಿ ಲಯನ್ಸ್ ಕ್ಲಬ್ ಪ್ರತಿಭಾ ಪುರಸ್ಕಾರ

ಕಿನ್ನಿಗೋಳಿ: ಮಾನವೀಯ ಮೌಲ್ಯಗಳನ್ನು ಆಧರಿಸಿ ಸಾಮಾಜಿಕ ಕಳಕಳಿಯಿಂದ ಆರ್ಥಿಕವಾಗಿ ಹಿಂದುಳಿದವರ ಅವಶ್ಯಕತೆಗಳಿಗೆ ಸ್ಪಂದಿಸಿ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಿನ್ಸಿಪಾಲ್ ಯಶವಂತ ಎನ್. ಸಾಲ್ಯಾನ್ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶುಕ್ರವಾರ ನಡೆದ ಕಿನ್ನಿಗೋಳಿ ಲಯನ್ಸ್ ಕ್ಲಬ್ ಆಯೋಜಿಸಿದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಗೂ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಸಂದರ್ಭ ನಡುಗೋಡು ಶಾಲಾ ಮಕ್ಕಳಿಗೆ ಪಾದರಕ್ಷೆ, ಬಳ್ಕುಂಜೆ ಸಂತಪೌಲರ ಶಾಲೆಗೆ ವಾಟರ್ ಕೂಲರ್, ಪರಿಸರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ನೀಡಲಾಯಿತು.
ಕಿನ್ನಿಗೋಳಿ ಪರಿಸರದಲ್ಲಿ ಎಸ್.ಎಸ್.ಎಲ್.ಸಿ. ಯಲ್ಲಿ ಉತ್ತಮ ಫಲಿತಾಂಶ ಪಡೆದ ಮೋರಾರ್ಜಿ ವಸತಿ ಶಾಲೆ ನಡುಗೋಡು ಸರಕಾರಿ ಪ್ರೌಡ ಶಾಲೆ ಹಾಗೂ ಮೇರಿವೆಲ್ ಆಂಗ್ಲ ಮಾಧ್ಯಮ ಪ್ರೌಡಶಾಲೆಗೆ ರೋಲಿಂಗ್ ಶೀಲ್ಡ್ ನೀಡಲಾಯಿತು.
ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರಾ, ಯುಗಪುರುಷ ಪ್ರದಾನ ಸಂಪಾದಕ ಭುವನಾಭಿರಾಮ ಉಡುಪ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರುಗಳಾದ ಮೆಲ್ವಿನ್ ಡಿಸೋಜ, ವೈ. ಕೃಷ್ಣ ಸಾಲ್ಯಾನ್, ಯೋಗೀಶ್ ರಾವ್ ಏಳಿಂಜೆ, ಕೋಶಾಧಿಕಾರಿ ಶಾಂಭವಿ ಶೆಟ್ಟಿ ವಲೇರಿಯನ್ ಸಿಕ್ವೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-17081412 Kinnigoli-17081413

Comments

comments

Comments are closed.

Read previous post:
Kinnigoli-17081411
ಸಮಾಜದಲ್ಲಿ ಮಹಿಳೆಯ ಸುರಕ್ಷತೆ : ಹಿಲ್ಡಾ ರಾಯಪ್ಪನ್

ಕಿನ್ನಿಗೋಳಿ: ಸಮಾಜದಲ್ಲಿ ಮಹಿಳೆಯ ಸುರಕ್ಷತೆಯ ಬಗ್ಗೆ ಸಂವಿದಾನದ ತಿದ್ದುಪಡಿ ಮಾಡಬೇಕಾದ ಅನಿವಾರ್ಯತೆ ಇದೀಗ ಬಂದಿದೆ ಎಂದು ಮಂಗಳೂರು ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಸಂಸ್ಥೆಯ ನಿರ್ದೇಶಕಿ ಹಿಲ್ಡಾ ರಾಯಪ್ಪನ್ ಹೇಳಿದರು....

Close