ಜನಪರ ಕಾಳಜಿಯ ಸಮಾಜ ಸೇವೆ ಮಾಡಬೇಕು

 ಕಿನ್ನಿಗೋಳಿ: ಸೇವಾ ಸಂಘ ಸಂಸ್ಥೆಗಳು ವ್ಯಾಣಿಜ್ಯ ದೃಷ್ಠಿಯತ್ತ ಗಮನ ಕೊಡದೆ ನಿಸ್ವಾರ್ಥತೆ ಹಾಗು ಜನಪರ ಕಾಳಜಿಯ ಸಮಾಜ ಸೇವೆ ಮಾಡಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು.
ಶನಿವಾರ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಕೊಲ್ಲೂರು ಶ್ರೀ ವಾತ್ಸಲ್ಯ ಪ್ರೇಮ ಸೇವಾ ಟ್ರಸ್ಟ್ ನ ಸೇವಾ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಟ್ರಸ್ಟ್‌ಗೆ ಸ್ಥಳ ದಾನ ಮಾಡಿದ ರಮೇಶ್ ಮೂಲ್ಯ ಹಾಗೂ ಸಹಕಾರ ನೀಡಿದ ಪ್ರೇಮಾನಂದ ಕುಲಾಲ್, ಲಕ್ಷಣ್ ಕುಂದರ್ ಮತ್ತು ಸುರೇಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿವಾಕರ ಚೌಟ, ಕಾಂತಾಬಾರೆ ಬೂದಬಾರೆ ಜನ್ಮ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ, ಬಿಲ್ಲವರ ಏಕೀಕರಣ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ದೀಪಕ್ ಕೋಟ್ಯಾನ್, ಶಾಂತಿನಗರ ಮೂಕಾಂಬಿಕ ದೇವಳದ ಧರ್ಮದರ್ಶಿ ವಿವೇಕಾನಂದ, ಸೇವಾ ಟ್ರಸ್ಟ್ ಕಾರ್ಯದರ್ಶಿ ಕಲಾವತಿ ಉಪಸ್ಥಿತರಿದ್ದರು.
ರಂಗಕರ್ಮಿ ಪರಮಾನಂದ ಸಾಲ್ಯಾನ್ ಸ್ವಾಗತಿಸಿ ಪ್ರಸ್ತಾವನೆಗೈದರು. ನಳಿನಾಕ್ಷಿ ಸಾಲ್ಯಾನ್ ವಂದಿಸಿದರು. ಪ್ರತೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Kinnigoli-17081415

Comments

comments

Comments are closed.

Read previous post:
Kinnigoli-17081414
ಪುನರೂರು ವಿಪ್ರ ಸಂಪದ : ಪ್ರತಿಭಾ ಪುರಸ್ಕಾರ

 ಕಿನ್ನಿಗೋಳಿ: ಪುನರೂರು ವಿಪ್ರ ಸಂಪದ ಆಶ್ರಯದಲ್ಲಿ ಶನಿವಾರ ಪುನರೂರು ಶ್ರೀವಿಶ್ವನಾಥ ದೇವಳದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಪ್ರತಿಭಾವಂತ ವಿದ್ಯಾರ್ಥಿಗಳಾದ ಎಂ. ಅಭಿಷೇಕ್, ಹಾಗೂ...

Close