ಸ್ಟೀವನ್ ರೇಗೊಗೆ ಸಿರಿ ಸಿನಿಮಾ ಪ್ರಶಸ್ತಿ

ಮಂಗಳೂರು: ಸಿರಿ ಕ್ರಿಯೇಷನ್, ಮಂಗಳೂರು ಹಾಗೂ ಚಿತ್ರ ಸಂಗಮ, ಬೆಂಗಳೂರು ಅವರು ನೀಡುವ ಸಿರಿ ಸಿನಿಮಾ ಪ್ರಶಸ್ತಿ- 2014ಗೆ ಮಂಗಳೂರು ವಿಜಯ ಕರ್ನಾಟಕದ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ, ದಾರಂದಕುಕ್ಕು ಆಯ್ಕೆಯಾಗಿದ್ದಾರೆ.

Kinnigoli-17081401

ಮುದ್ರಣ ಮಾಧ್ಯಮದಲ್ಲಿ ಕರಾವಳಿ ಸಿನಿಮಾ ಲೋಕದ ವಿಶೇಷ ವರದಿಗಳನ್ನು ಪರಿಗಣಿಸಿ ಸಿರಿ ಸಿನಿಮಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಸ್ಟೀವನ್ ರೇಗೊ ಅವರ ಗ್ರಾಮೀಣ ವರದಿಗಾರಿಕೆಗೆ ಈ ಹಿಂದೆ ಕಿನ್ನಿಗೋಳಿಯ ಕೆ.ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿ( ಪ.ಗೋ) ಹಾಗೂ ಮಂಗಳೂರಿನ ಮೆಗಾ ಮಿಡಿಯಾ ಪ್ರಶಸ್ತಿಗಳು ಸಂದಿದೆ. ಅವರು ಮೂಲತಃ ಪುತ್ತೂರು ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ಅವರ ಪುತ್ರ.

Comments

comments

Comments are closed.

Read previous post:
Kinnigoli-15081407.
ಮುಲ್ಕಿ ಪ೦ಚಾಯತ್ ವತಿಯಿ೦ದ ಸ್ವಾತ೦ತ್ರ್ಯೋತ್ಸವ

ಮುಲ್ಕಿ: ದೇಶದ ಸ್ವಾತ೦ತ್ರ್ಯಕ್ಕಾಗಿ ಹೋರಾಟ ಮಾಡಿದ೦ತಹ ಸ್ವಾತ೦ತ್ರ್ಯ ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಕಾರ್ಯವನ್ನು ಮಾಡಬೇಕೆ೦ದು ಮುಲ್ಕಿ ನಗರ ಪ೦ಚಾಯತ್ ಅಧ್ಯಕ್ಸೆ ಮೀನಾಕ್ಸಿ ಬ೦ಗೇರ ಹೇಳಿದರು. ಮುಲ್ಕಿ ನಗರ ಪ೦ಚಾಯತ್...

Close