ಮೂಲ್ಕಿ: ವಾರ್ಷಿಕ ಕ್ರೀಡಾ ಕೂಟ

ಮೂಲ್ಕಿ: ಸಂಘಟಕರಾಗಿ ಸಮಾಜ ಸೇವಕರಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವೃತ್ತಿ ಮತ್ತು ಪ್ರವೃತ್ತಿಯಲ್ಲಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನಿಸುವುದು ಉತ್ತಮ ಕಾರ್ಯ ಎಂದು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಪ್ರಭಂದಕ ಸದಾನಂದ ಪೂಜಾರಿ ಹೇಳಿದರು.
ಶ್ರೀ ನಾರಾಯಣ ಗುರು ಇಂಡೋರ್ ಗೇಮ್ಸ್ ಕ್ಲಬ್ ಆಶ್ರಯದಲ್ಲಿ ನಡೆದ ವಾರ್ಷಿಕ ಕ್ರೀಡಾ ಕೂಟದ ಸಂದರ್ಭ ಧಾರ್ಮಿಕ ಹಾಗೂ ಶಾಂಸ್ಕೃತಿಕ ಕಾರ್ಯಕ್ರಮ ಸಂಘಟಕ ಗಿರಿಧರ ಅಮೀನ್ ಕೊಕ್ಕರಕಲ್ ರವರನ್ನು ಸನ್ಮಾನಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಯದೀಶ್ ಅಮೀನ್ ವಹಿಸಿದ್ದರು. ಕ್ಷೇತ್ರದ ಅರ್ಚಕ ಶ್ರೀಕೃಷ್ಣ ಶಾಂತಿ ಆಶೀರ್ವಚನ ನೀಡಿದರು. ಸಂಘಟಕರಾದ ವಿಠಲ ಕಾಮತ್,ಪಳ್ಳಿಗುತ್ತು ಸುರೇಶ್ ಶೆಟ್ಟಿ,ರಮೇಶ್ ಕೊಕ್ಕರಕಲ್,ರಮಾನಾಥ ಸುವರ್ಣ,ಮೈಕಲ್,ಎನ್.ಟಿ ಪೂಜಾರಿ,ನಾರಾಯಣ ಪೂಜಾರಿ, ನಾಗೇಶ್ ದೇವಾಡಿಗಾ,ವಿಶ್ವನಾಥ ಸುವರ್ಣ, ಸುರೇಶ್ ಸೇರಿಗಾರ್ ಮತ್ತಿತರರಿದ್ದರು.
ವೆಂಕಟೇಶ್ ಭಟ್ ಬಪ್ಪನಾಡು ಸ್ವಾಗತಿಸಿದರು.ಚೈಬಾವು ಕಾರ್ಯಕ್ರಮ ನಿರೂಪಿಸಿದರು.ರಮೇಶ್ ಕೊಕ್ಕರಕಲ್ ವಂದಿಸಿದರು.

Kinnigoli-18081401

Bhagravan Sanil

Comments

comments

Comments are closed.

Read previous post:
Kinnigoli-17081415
ಜನಪರ ಕಾಳಜಿಯ ಸಮಾಜ ಸೇವೆ ಮಾಡಬೇಕು

 ಕಿನ್ನಿಗೋಳಿ: ಸೇವಾ ಸಂಘ ಸಂಸ್ಥೆಗಳು ವ್ಯಾಣಿಜ್ಯ ದೃಷ್ಠಿಯತ್ತ ಗಮನ ಕೊಡದೆ ನಿಸ್ವಾರ್ಥತೆ ಹಾಗು ಜನಪರ ಕಾಳಜಿಯ ಸಮಾಜ ಸೇವೆ ಮಾಡಬೇಕು ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ...

Close