ಕಟೀಲು ನಂದಿನಿ ಬ್ರಾಹ್ಮಣ ಸಭಾ ವಾರ್ಷಿಕೋತ್ಸವ

 ಕಿನ್ನಿಗೋಳಿ: ಆಧುನಿಕತೆಯ ಜೊತೆಗೆ ಧಾರ್ಮಿಕ ಸಂಪ್ರದಾಯ, ಆಚರಣೆಗಳ, ಮಹತ್ವಗಳ ಅರಿವು ಮುಂದಿನ ಯುವ ಜನರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕಾಗಿದೆ. ಶಿಸ್ತು ಬದ್ದ ಸಂಸ್ಕಾರ ಪೂಜೆ, ಜಪ, ಧಾರ್ಮಿಕ ಅನುಷ್ಟಾನಗಳಿಂದ ಬ್ರಾಹ್ಮಣ್ಯತ್ವ ಉಳಿಸಿಕೊಂಡಲ್ಲಿ ಬ್ರಾಹ್ಮಣರಿಗೆ ಗೌರವ ಸಿಗುವುದು ಎಂದು ಉಡುಪಿ ಅನಂತೇಶ್ವರ ದೇವಳದ ಸಗ್ರಿ ವೇದವ್ಯಾಸ ಐತಾಳ್ ಹೇಳಿದರು.
ಭಾನುವಾರ ನಡೆದ ಕಟೀಲು ನಂದಿನಿ ಬ್ರಾಹ್ಮಣ ಸಭಾದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಸಾಧಕ ಎಕ್ಕಾರು ಡಾ. ಪದ್ಮನಾಭ ಭಟ್ ಹಾಗೂ ಸೌಮ್ಯಾ ನಾರಾಯಣ ಭಟ್ ಅವರನ್ನು ಅಭಿನಂದಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.
ಸಾಹಿತಿ ಶಕುಂತಳಾ ಭಟ್ , ನಂದಿನಿ ಬ್ರಾಹ್ಮಣ ಸಭಾ ಅಧ್ಯಕ್ಷ ಡಾ.ಶಶಿಕುಮಾರ್, ಕಾರ್ಯದರ್ಶಿ ಕೊಡೆತ್ತೂರು ವೇದವ್ಯಾಸ ಉಡುಪ, ರಾಘವೇಂದ್ರ ಭಟ್, ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ ಮತ್ತಿತರರಿದ್ದರು. ಅನಂತಕೃಷ್ಣ, ಸುಧಾ ಉಡುಪ ಅತಿಥಿಗಳನ್ನು ಪರಿಚಯಿಸಿದರು. ಸುರೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

Kinnigoli-18081405

Comments

comments

Comments are closed.

Read previous post:
Kinnigoli-18081404
ಕೊಲ್ಲೂರು : ಮುದ್ದು ಕೃಷ್ಣ ಸ್ಪರ್ಧೆ

ಕಿನ್ನಿಗೋಳಿ:  ಹಳೆ ವಿದ್ಯಾರ್ಥಿ ಸಂಘ ಕೊಲ್ಲೂರು ಇದರ ವತಿಯಿಂದ ಭಾನುವಾರ ಕೊಲ್ಲೂರು ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಗ್ರಾಮದ ಪುಟಾಣಿಗಳಿಗಾಗಿ ಏಳನೇ ವರ್ಷದ ಮುದ್ದು ಕೃಷ್ಣ ಸ್ಪರ್ಧೆ ನಡೆಯಿತು....

Close