ಮೂಲ್ಕಿಯ ಅಂಗಡಿಗಳಲ್ಲಿ ಸರಣಿ ಕಳವು

ಮೂಲ್ಕಿ: ಕಾರ್ನಾಡಿನ ಕೆಲವು ಅಂಗಡಿಗಳಲ್ಲಿ ಮಂಗಳವಾರ ರಾತ್ರಿ ಸರಣಿ ಕಳ್ಳತನ ನಡೆದಿದೆ. ಕಾರ‍್ನಾಡಿನ ದೇಜಪ್ಪ ಎಂಬವರ ತರಕಾರಿ ಅಂಗಡಿಗೆ ಹಿಂಬದಿಯ ಹಂಚನ್ನು ತೆಗೆದು ಒಳಬದಿಯ ಮರದ ಮುಚ್ಚಿಗೆಯನ್ನು ಬದಿಗೆ ಸರಿಸಿ ಅಂಗಡಿಗೆ ನುಗ್ಗಿ ಹರಕೆಯ ಕಾಣಿಕೆಡಬ್ಬಿಯಲ್ಲಿದ್ದ ನಗದು ಹಾಗೂ ಸಣ್ಣ ಪುಟ್ಟ ಸಾಮಾನುಗಳನ್ನು ಕಳ್ಳತನ ಮಾಡಿದ್ದಾರೆ. ಹಾಗೆಯೇ ಬದಿಯಲ್ಲಿರುವ ಶೇಖರ ಎಂಬವರ ಇಸ್ತ್ರಿ ಅಂಗಡಿಗೆ ಕೂಡ ಪ್ರವೇಶಿಸಿ ಕೈಚೀಲವನ್ನು ಕೊಂಡುಹೋಗಿದ್ದಾರೆ. ಯಾರೋ ಗೊತ್ತಿದ್ದವರೇ ಈ ಕೃತ್ಯ ಎಸಗಿರಬಹುದು ಎಂದು ಸ್ಥಳೀಯರ ಆರೋಪ. ದೇಜಪ್ಪಇವರ ತರಕಾರಿ ಅಂಗಡಿ ಕಳ್ಳತನವಾಗುವುದು ಎರಡನೇ ಬಾರಿಯಾಗಿದೆ. ಮೂಲ್ಕಿ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Kinnigoli20081402 Kinnigoli20081403

Puneethkrishna

Comments

comments

Comments are closed.

Read previous post:
Kinnigoli20081401
ಅಧ್ಯಯನ, ಓದು ಹಾಗೂ ಲೌಕಿಕ ಜ್ಞಾನ ಅತೀ ಮುಖ್ಯ

ಕಿನ್ನಿಗೋಳಿ: ಸಂಸ್ಕಾರಯುತ ಸಮಾಜವನ್ನಾಗಿ ಪರಿವರ್ತಿಸುವ ಸಾಹಿತ್ಯ ಕೃತಿಗಳು ಹಾಗೂ ಕವನಗಳು ಬರಹಗಾರರಿಂದ ಮೂಡಿ ಬರಬೇಕು. ಇದಕ್ಕೆ ನಿರಂತರ ಅಧ್ಯಯನ, ಓದು ಹಾಗೂ ಲೌಕಿಕ ಜ್ಞಾನ ಅತೀ ಮುಖ್ಯ ಎಂದು...

Close