ಅಧ್ಯಯನ, ಓದು ಹಾಗೂ ಲೌಕಿಕ ಜ್ಞಾನ ಅತೀ ಮುಖ್ಯ

ಕಿನ್ನಿಗೋಳಿ: ಸಂಸ್ಕಾರಯುತ ಸಮಾಜವನ್ನಾಗಿ ಪರಿವರ್ತಿಸುವ ಸಾಹಿತ್ಯ ಕೃತಿಗಳು ಹಾಗೂ ಕವನಗಳು ಬರಹಗಾರರಿಂದ ಮೂಡಿ ಬರಬೇಕು. ಇದಕ್ಕೆ ನಿರಂತರ ಅಧ್ಯಯನ, ಓದು ಹಾಗೂ ಲೌಕಿಕ ಜ್ಞಾನ ಅತೀ ಮುಖ್ಯ ಎಂದು ಹಿರಿಯ ಚಿಂತಕ ಸಾಹಿತಿ ಅಂಶುಮಾಲಿ ಹೇಳಿದರು.
ಕಿನ್ನಿಗೋಳಿ ಅನಂತ ಪ್ರತಿಭಾ ಪ್ರಕಾಶನ, ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಮತ್ತು ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜಿನ ಸಹಬಾಗಿತ್ವದಲ್ಲಿ ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ನಡೆದ ಕಾದಂಬರಿ ” ಉಪ್ಪಡ್”ದ ಕುರಿತು ವಿಚಾರ ಗೋಷ್ಠಿ ಹಾಗೂ ಕವಿ ಗೋಷ್ಠಿಯಲ್ಲಿ ಮಾತನಾಡಿದರು.
ಕಟೀಲು ದೇವಳ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಎಂ. ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಎನ್. ಪಿ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಾಹಿತಿಗಳಾದ ಮುದ್ದು ಮೂಡುಬೆಳ್ಳೆ, ಎ. ನರಸಿಂಹ, ತೋಕೂರು ಐ. ಟಿ. ಐ ಪ್ರಿನ್ಸಿಪಾಲ್ ವೈ. ಎನ್. ಸಾಲ್ಯಾನ್ ಉಪಸ್ಥಿತರಿದ್ದರು.
ಯೋಗೀಶ್ ಕಾಂಚನ್, ಎಂ. ಡಿ. ಮಂಚಿ, ಡಾ| ಹರಿಪ್ರಸಾದ್ ಶೆಟ್ಟಿ , ಪ್ರಸನ್ನ ಸಚ್ಚರಿಪೇಟೆ, ಪ್ರಸ್ಟೀತಾ, ಪ್ರೇಮನಾಥ, ಮನಿಷಾ ಕವಿ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ಸಾಹಿತಿ ಉದಯಕುಮಾರ್ ಹಬ್ಬು ಸ್ವಾಗತಿಸಿದರು. ಮನಿಷಾ ವಂದಿಸಿದರು. ಉಪನ್ಯಾಸಕ ಕೇಶವ್ ಹಾಗೂ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.

Kinnigoli20081401

Comments

comments

Comments are closed.

Read previous post:
Kinnigoli-18081417
ಕಾರ್ನಾಡಿನಲ್ಲಿ ಮುದ್ದು ಕ್ರಷ್ಣ ಸ್ಪರ್ಧೆ

ಮುಲ್ಕಿ ; ಮುಲ್ಕಿಯ ಕಾರ್ನಾಡಿನ ಶ್ರೀ ಧರ್ಮಸ್ತಾನ ಸೇವಾ ಯುವಕ ವ್ರ೦ದದ ಆಶ್ರಯದಲ್ಲಿ ಕಾರ್ನಾಡಿನ ಧರ್ಮಸ್ತಾನದಲ್ಲಿ ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರಗಿದ ಮುದ್ದು ಕ್ರಷ್ಣ ಸ್ಪರ್ಧೆಯಲ್ಲಿ ವಿಜೇತರಿಗೆ...

Close