ಶ್ರೀ ಕೃಷ್ಣ ಜನ್ಮಾಷ್ಟಮಿ – ಸ್ಪರ್ದೆಗಳ ಸಮಾರೋಪ

ಮೂಲ್ಕಿ: ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರದ ತಿಳುವಳಿಕೆಯ ಜೊತೆಗೆ ನಾಯಕತ್ವದ ಗುಣಗಳನ್ನು ಗಳಿಸಲು ಸ್ಪರ್ದೆಗಳು ಬಹು ಸಹಕಾರಿಯಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಸಹಾಯಕ ಮಹಾ ಪ್ರಭಂದಕ ಕೆ ಸುರೇಂದ್ರ ಭಂಢಾರಿ ಹೇಳಿದರು.

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಭಾ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಸ್ಪರ್ದೆಗಳ ಸಮಾರೋಪ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳಿಗೆ ಶಾಲೆಯ ವಿಷಯಗಳಿಂದ ಭಿನ್ನವಾಗಿ ತಮ್ಮನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ಈ ಸ್ಪರ್ದೆಗಳು ಮನೆ ಹಿರಿಯರನ್ನೂ ಮಕ್ಕಳೊಂದಿಗೆ ಮಕ್ಕಳಂತೆ ಸಂತೋಷ ಪಟ್ಟುಕ್ಕೊಳ್ಳಲು ಉತ್ತಮ ಅವಕಾಶವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಲ್ಕಿ ಜಿಎಸ್‌ಬಿ ಸಭಾ ಅಧ್ಯಕ್ಷ ಯಂ ಸತ್ಯೇಂದ್ರ ಶೆಣೈ ವಹಿಸಿದ್ದರು. ಜಿಎಸ್‌ಬಿ ಸಭಾ ಕಾರ್ಯದರ್ಶಿ ವಿ. ಪ್ರಸಾದ್ ಕಾಮತ್, ಯಂ ರಾಮದಾಸ ಕಾಮತ್ ಉಪಾಧ್ಯಕ್ಷ ಜಿ.ಜಿ.ಕಾಮತ್ ಕೋಶಾಧಿಕಾರಿ ಯು ಬಾಬುರಾಯ ಶೆಣೈ ಉಪಸ್ಥಿತರಿದ್ದರು ಎಂ.ರಾಜೇಂದ್ರ ಪ್ರಭು ನಿರೂಪಿಸಿದರು.

Kinnigoli-2308-201403

ಮುದ್ದು ಕೃಷ್ಣ ಸ್ಪರ್ಧೆ 4ವರ್ಷದ ಒಳಗಿನ ಮಕ್ಕಳಿಗೆ:

ಪ್ರಥಮ: ಸನ್ನಿಧಿ ನಾಯಕ್, ದ್ವಿತೀಯ: ಅಜಿತ್ ಕಾಮತ್, ತೃತೀಯ: ಮಹಾಮಯಾ ಶೆಣೈ

ಮುದ್ದುಕೃಷ್ಣ ಸ್ಪರ್ಧೆ 4ರಿಂದ 7ವರ್ಷದ ಒಳಗಿನ ಮಕ್ಕಳಲ್ಲಿ

ಪ್ರಥಮ: ಪ್ರಿಯಂವಧಾ ಭಟ್, ದ್ವಿತೀಯ ಶ್ಯಾಮಲಾ ಕಾಮತ್, ತೃತೀಯ: ಸಿದ್ಧಿ ಭಟ್.

ಐಸ್‌ಕ್ರಿಮ್ ತಿನ್ನುವ ಸ್ಪರ್ಧೆ 10ವರ್ಷದ ಒಳಗಿನ ಮಕ್ಕಳಿಗೆ

ಪ್ರಥಮ: ಆದಿತ್ಯ ಭಟ್, ಸಂದೀಪ್.ಯು.ಪೈ, ದ್ವಿತೀಯ: ವೀಕ್ಷಿತ್.ವಿ.ಪ್ರಭು, ರೋಹಿತ್.ಆರ್.ನಾಯಕ್, ತೃತೀಯ: ಹೃತಿಕಾ.ಆರ್.ಶೆಣೈ

Bhagyavan Sanil

Comments

comments

Comments are closed.