ನೂತನ ಪಠ್ಯ ರಪ್ತು ನಿರ್ವಹಣೆ

ಮೂಲ್ಕಿ: ಕರಾವಳಿ ಜಿಲ್ಲೆಗಳು ರಪ್ತು ಪೂರಕ ಸವಲತ್ತುಗಳನ್ನು ಹಾಗೂ ವ್ಯವಸ್ಥೆಗಳನ್ನು ಗೊಂಡಿರುವುದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ರಪ್ತು ನಿರ್ವಹಣೆಯ ಬಗ್ಗೆ ನಡೆಸುವ ಅಧ್ಯಯನ ಆರ್ಥಿಕ ಉನ್ನತಿಗೆ ಪೂರಕವಾಗಲಿದೆ ಎಂದು ಮಂಗಳೂರು ಸೈಂಟ್ ಅಲೋಶಿಯಸ್ ಅಟಾನಾಮೊಸ್ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಡಾ.ಸುರೇಶ್ ಪೂಜಾರಿ ಹೇಳಿದರು.
ಮೂಲ್ಕಿ ವಿಜಯಾ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಕಾಲೇಜು ವಾಣಿಜ್ಯ ವಿಭಾಗದ ಉಪನ್ಯಾಸಕ ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ರಚಿಸಿರುವ ಮಂಗಳೂರು ವಿಶ್ವ ವಿದ್ಯಾನಿಲಯದ ಬಿಬಿಎಂ ಐದನೇ ಸಮಿಸ್ಟರ್ ವಿದ್ಯಾರ್ಥಿಗಳಿಗಾಗಿ ರಚಿಸಿರುವ ನೂತನ ಪಠ್ಯ ರಪ್ತು ನಿರ್ವಹಣೆ(ಎಕ್ಸ್‌ಪೋರ್ಟ್ ಮ್ಯಾನೆಜ್ಮೆಂಟ್) ಬಿಡುಗಡೆಗೊಳಿಸಿ ಮಾತನಾಡಿದರು.
ನೂತನ ಪಠ್ಯದಲ್ಲಿ ಸಂಕೀರ್ಣ ವಿಷಯಗಳನ್ನು ಬಹಳ ಸರಳವಾಗಿ ನಿರೂಪಿಸಲಾಗಿದ್ದು ವಿದ್ಯಾರ್ಥಿಗಳಿಗೆ ಹೆಚ್ಚಿನ ಉಪಯೋಗ ಲಭಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಾ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ಶಂಕರ್ ಅತಿಥಿಗಳಾಗಿದ್ದರು. ಅಸ್ವಿನಿ ಪ್ರಾರ್ಥಿಸಿದರು, ಪ್ರೊ.ಹೆಚ್.ಜಿ.ನಾಗರಾಜ ನಾಯಕ್ ಸ್ವಾಗತಿಸಿದರು,ಪ್ರಶಾಂತ್ ನಿರೂಪಿಸಿದರು. ಅರುಣಾ ವಂದಿಸಿದರು.

Kinnigoli-2308-201402

Bhagyavan Sanil

Comments

comments

Comments are closed.

Read previous post:
Kinnigoli-2308-201401
ಬಾಲ್ಯ ವಿವಾಹ ನಿಷೇದದ ಬಗ್ಗೆ ತರಬೇತಿ ಕಾರ‍್ಯಾಗಾರ

ಕಿನ್ನಿಗೋಳಿ: ಮಹಿಳಾ ಮತ್ತು ಮಕ್ಕಳ ಹಾಗೂ ಶಿಶು ಅಬಿವೃದ್ದಿ ಇಲಾಖೆ ಮಂಗಳೂರು ಇದರ ಆಶ್ರಯದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಬಾಲ್ಯ ವಿವಾಹ ನಿಷೇದ ಬಗ್ಗೆ ಅಧಿಕಾರಿಗಳ ತರಬೇತಿ ಕಾರ್ಯಗಾರವನ್ನು...

Close