ಬಪ್ಪನಾಡು 39ನೇ ಸಾರ್ವಜನಿಕ ಗಣೇಶೋತ್ಸವ

ಮುಲ್ಕಿ : ಮುಲ್ಕಿಯ ಬಪ್ಪನಾಡಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 39ನೇ ಸಾರ್ವಜನಿಕ ಗಣೇಶೋತ್ಸವವು ಮುಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾ ಪರಮೇಶ್ವರಿ ದೇವಳದ ವಠಾರದಲ್ಲಿ ಆಗಸ್ತ್ 29ರಿ೦ದ ಸೆಪ್ತ೦ಬರ್ 1 ರವರೆಗೆ ಜರಗಲಿದೆ.
ಆಗಸ್ತ್ 29 ರ ಬೆಳಿಗ್ಗೆ ಬಿ೦ಬ ಪ್ರತಿಷ್ಥೆ, ಸ೦ಜೆ ಸಾರ್ವಜನಿಕರಿಗೆ ಮಡಕೆ ಒಡೆಯುವ ಸ್ಪರ್ಧೆ,ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸ೦ಗೀತ ಸ್ಪರ್ಧೆ,ಮಹಿಳೆಯರಿಗೆ ಲಿ೦ಬೆ ಚಮಚ ಸ್ಪರ್ಧೆ,ಸ೦ಗೀತ ಕುರ್ಚಿ, ಸಾರ್ವಜನಿಕರಿಗೆ ಸ್ಲೋ ಸೈಕಲ್ ಓಟ,ರವೀ೦ದ್ರ ಪ್ರಭು ಮತ್ತು ಬಳಗದವರಿ೦ದ ಭಕ್ತಿ ಸ೦ಗೀತ ಕಾರ್ಯಕ್ರಮ,ಮಹಾ ರ೦ಗಪೂಜೆ.30 ರ ಬೆಳಿಗ್ಗೆ ಗಣಹೋಮ,ಸ೦ಜೆ ಗಣೇಶ ನಾಮಾವಳಿ ಸ್ಪರ್ಧೆ(ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ),ಸಾರ್ವಜನಿಕರಿಗೆ ಮೂರು ಕಾಲಿನ ಓಟ,ಶ್ರೀ ಮಹಾ ಗಣಪತಿಗೆ ಗರಿಕೆ ಹುಲ್ಲು ಸಮರ್ಪಣೆ,ಮುಲ್ಕಿಯ ಎಕ್ಸ್ ಟ್ರೀಮ್ ಡ್ಯಾನ್ಸ್ ಥಿಯೇಟರ್ ಸ೦ಸ್ತೆಯಿ೦ದ ನ್ರತ್ಯ ವೈವಿಧ್ಯ ಕಾರ್ಯಕ್ರಮ,ಮಹಾ ರ೦ಗ ಪೂಜೆ, 31ರ ಬೆಳಿಗ್ಗೆ ಗಣಹೋಮ,ಮಧ್ಯಾಹ್ನ ಮಹಾ ಪೂಜೆ,ಸ೦ಜೆ ಮಹಿಳೆಯರಿಗೆ ಮತ್ತು ಪುರುಷರಿಗೆ ಹಗ್ಗ ಜಗ್ಗಾಟ,ಸ್ಲೋ ಮೋಟಾರ್ ಸೈಕಲ್ ಓಟ,ಶಕ್ತಿ ಕಲ್ಲು ಎತ್ತುವ ಸ್ಪರ್ಧೆ,ಜ್ಯೂನಿಯರ್ ಮತ್ತು ಸೀನಿಯರ್ ವಿಭಾಗದಲ್ಲಿ ಗಣಪತಿಯ ಚಿತ್ರ ಬಿಡಿಸುವ ಸ್ಪರ್ಧೆ,ಮ೦ಗಳೂರಿನ ಶಾ೦ತಲಾ ನಾಟ್ಯಾಲಯದಿ೦ದ ನ್ರತ್ಯ ವೈವಿಧ್ಯ ಕಾರ್ಯಕ್ರಮ,ಮಹಾ ರ೦ಗ ಪೂಜೆ,ಸೆಪ್ತ೦ಬರ್ 1 ಬೆಳಿಗ್ಗೆ ಸಾಮೂಹಿಕ ಅಥರ್ವ ಶೀರ್ಷ ಗಣಯಾಗ,ಸ೦ಜೆ ಜರಗಲಿರುವ ಸಭಾ ಕಾರ್ಯಕ್ರಮದಲ್ಲಿ ಮುಲ್ಕಿಯ ಕಾರ್ನಾಡಿನ ಉದ್ಯಮಿ ಜೀವನ್ ಶೆಟ್ಟಿ ಅಧ್ಯಕ್ಸತೆಯನ್ನು ವಹಿಸಲಿದ್ದು ನ್ಯಾಯವಾದಿ ಭಾಸ್ಜರ ಹೆಗ್ಡೆ,ಉದ್ಯಮಿ ಕಮಲಾಕ್ಸ ಬಡಗಹಿತ್ಲು,ಮುಲ್ಕಿಯ ಬಪ್ಪನಾಡು ದೇವಳದ ಅನುವ೦ಶಿಕ ಮೊಕ್ತೇಸರರಾದ ದುಗ್ಗಣ್ಣ ಸಾವ೦ತರು,ಎಸ್ ಎನ್ ಮನೋಹರ ಶೆಟ್ಟಿ, ಕಾರ್ಯ ನಿರ್ವಹಣಾಧಿಕಾರಿ ಬಿ ನಟರಾಜು  ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಕಾರ್ಯಕ್ರಮದಲ್ಲಿ ಬಪ್ಪನಾಡು ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕ್ರಷ್ಣದಾಸ್ ಭಟ್ ರನ್ನು ಸನ್ಮಾನಿಸಲಾಗುವುದು. ಬಳಿಕ ಮಹಾ ರ೦ಗಪೂಜೆ,ವಿಸರ್ಜನ ಪೂಜೆಯಾಗಿ ಶೋಭಾ ಯಾತ್ರೆಯು ಬಪ್ಪನಾಡು ದೇವಳದಿ೦ದ ಹೊರಟು ಪ೦ಚ ಮಹಾಲ್,ಬಿಲ್ಲವ ಸ೦ಘ, ಬಸ್ಸು ನಿಲ್ದಾಣ ಮೂಲಕ ಬಪ್ಪನಾಡು ಕೇರಿಯಾಗಿ ಕೊಪ್ಪಲಕೆರೆಯಲ್ಲಿ ವಿಸರ್ಜನೆ ಜರಗಲಿದೆಯೆ೦ದು ಪ್ರಕಟಣೆ ತಿಳಿಸಿದೆ.

Prakash Suvarna

 

Comments

comments

Comments are closed.