ಪದ್ಮನೂರು ಉಚಿತ ವೈದ್ಯಕೀಯ ತಪಾಸಣೆ

ಕಿನ್ನಿಗೋಳಿ: ಹಿಂದಿನ ಕಾಲದವರಿಗಿಂತ ಇಂದಿನವವರಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿದ್ದು ಯೋಗಾಸನ ವ್ಯಾಯಾಮದಂತಹ ಚಟುವಟಿಕೆ, ನಿಯಮಿತ ಆಹಾರ ಸೇವನೆ ಹಾಗು ಮನೆ ಸರಳ ಮನೆ ಮದ್ದು ಅಥವಾ ನುರಿತ ವೈದ್ಯರಿಂದ ನಿಯಮಿತ ತಪಾಸಣೆ ಮಾಡಿದಾಗ ಆರೋಗ್ಯ ಸೃಧೃಡಗೊಳ್ಳಬಹುದು. ಎಂದು ಮಂಗಳೂರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯೋಜನಾಧಿಕಾರಿ ರಾಘವ ಎಂ. ಹೇಳಿದರು.
ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನೂರು ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೆಮ್ರಾಲ್ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯ ಸಹಯೋಗದೊಂದಿಗೆ ಭಾನುವಾರ ದ.ಕ. ಜಿ.ಪ. ಹಿ.ಪ್ರಾ. ಶಾಲೆ ಪದ್ಮನೂರಿನಲ್ಲಿ ನಡೆದ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.
ಈ ಸಂದರ್ಭ ಡಾ. ಪ್ರಿಯದರ್ಶಿನಿ, ಡಾ. ಮಂಗಳ, ದ.ಕ. ಜಿ.ಪ. ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಗಿರಿಜಾ, ಕೆಮ್ರಾಲ್ ಒಕ್ಕೂಟದ ಶಶಿ ಸುರೇಶ್, ಪದ್ಮನೂರು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.

Kinnigoli-24081401 Kinnigoli-24081402 Kinnigoli-24081403

Comments

comments

Comments are closed.

Read previous post:
ಬಪ್ಪನಾಡು 39ನೇ ಸಾರ್ವಜನಿಕ ಗಣೇಶೋತ್ಸವ

ಮುಲ್ಕಿ : ಮುಲ್ಕಿಯ ಬಪ್ಪನಾಡಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 39ನೇ ಸಾರ್ವಜನಿಕ ಗಣೇಶೋತ್ಸವವು ಮುಲ್ಕಿಯ ಬಪ್ಪನಾಡಿನ ಶ್ರೀ ದುರ್ಗಾ ಪರಮೇಶ್ವರಿ ದೇವಳದ ವಠಾರದಲ್ಲಿ ಆಗಸ್ತ್...

Close