ಆ. 26: ಬಿಎಸ್.ಎನ್.ಎಲ್. ಗುತ್ತಿಗೆ ಕಾರ್ಮಿಕರ ಮುಷ್ಕರ

ಕಿನ್ನಿಗೋಳಿ : ದೇಶದಲ್ಲಿನ ಬಿಎಸ್.ಎನ್.ಎಲ್. ಕೇಂದ್ರ ಕಛೇರಿ ಹಾಗೂ ಎಕ್ಸ್‌ಚೆಂಜ್‌ಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಅಖಿಲಾ ಭಾರತೀಯ ಕ್ಯಾಶುವಲ್ ಎಂಡ್ ಕಾಂಟ್ರಾಂಕ್ಟ್ ಫೆಡರೇಶನ್ ರಾಷ್ಟ್ರ ವ್ಯಾಪ್ತಿಯಲ್ಲಿ ನೀಡಿದ ಪ್ರತಿಭಟನೆಯ ಕರೆಯಂತೆ ಆಗಸ್ಟ್ 26ರಂದು ಮಂಗಳೂರು ಪಾಂಡೇಶ್ವರ ಬಿಎಸ್.ಎನ್.ಎಲ್. ಪ್ರಧಾನ ಕಛೇರಿ ಮುಂದೆ ಗುತ್ತಿಗೆ ಕಾರ್ಮಿಕರ ಮುಷ್ಕರ ನಡೆಯಲಿದೆ ಎಂದು ದ.ಕ. ಜಿಲ್ಲಾ ಬಿಎಸ್.ಎನ್.ಎಲ್. ಗುತ್ತಿಗೆ ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸುಳ್ಯ ಅವರು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 250 ಮಂದಿ ಗುತ್ತಿಗೆ ಕಾರ್ಮಿಕರು ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಂಸ್ಥೆಯ ಹಿರಿಯ ಅಧಿಕಾರಿಗಳು ಹೆಚ್ಚುವರಿ ಕೆಲಸ ಮಾಡುವಂತೆ ಒತ್ತಡ ಹಾಕಿ, ಸಂಸ್ಥೆ ನಷ್ಟದಲ್ಲಿದೆ ಎಂದು ಸಬೂಬು ನೀಡುತ್ತಾರೆ. ದ.ಕ.ಜಿಲ್ಲೆಯ ಕೆಲ ತಾಲ್ಲೂಕುಗಳಲ್ಲಿ ಈಗಾಗಲೇ ಸುಮಾರು 15ಸಬೇಕು ಎಂದು ಒತ್ತಾಯಿಸಿದ್ದಾರೆ.
ಬಡ ಗುತ್ತಿಗೆ ನೌಕರರಿಗೆ ಬರೆ ಎಳೆಯುತ್ತಿರುವ ಸಂಸ್ಥೆಯ ಕಾರ್ಮಿಕ ವಿರೋಧಿ, ಜನವಿರೋದಿ ನೀತಿಯನ್ನು ಖಂಡಿಸಿ ಆಗಸ್ಟ್ 26 ರಂದು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗೆ ಕಾರ್ಮಿಕರ ಪಧಾಧಿಕಾರಿಗಳಾದ ಉದಯ ನಾಯ್ಕ್, ಶಿವಶಂಕರ್, ಕುಮಾರ್ ಕೆ. ಮೂಲ್ಕಿ, ಆನಂದ ಕಿನ್ನಿಗೋಳಿ, ದಯಾನಂದ ಕರ್ನಿರೆ ಉಪಸ್ಥಿತರಿದ್ದರು.

BSNL Casual and contract Federation Employees organised Nationwide  Protest Demonstrations on 26th August, 2014 

Comments

comments

Comments are closed.