ಮಾತೃ ಭಾಷೆಯ ಬಗ್ಗೆ ಕೀಳರಿಮೆ ಬೇಡ

ಕಿನ್ನಿಗೋಳಿ : ಭವ್ಯ ಇತಿಹಾಸವಿರುವ ಕೊಂಕಣಿ ಭಾಷೆ 41 ಪಂಗಡಗಳ ಮಾತೃ ಭಾಷೆಯಾಗಿದ್ದು ಯುವ ಜನತೆ ಮಾತೃ ಭಾಷೆಯ ಬಗ್ಗೆ ಹಿಂಜರಿಕೆ ಕೀಳರಿಮೆ ವ್ಯಕ್ತ ಪಡಿಸದೆ ಮುಂದಿನ ಪೀಳಿಗೆಗೂ ಭಾಷೆಯನ್ನು ತಿಳಿ ಹೇಳಬೇಕಾಗಿದೆ. ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರೋಯ್ ಕ್ಯಾಸ್ತಲಿನೊ ಹೇಳಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಕಥೋಲಿಕ್ ಸಭಾ , ಸ್ತ್ರಿ ಸಂಘಟನ್, ಭಾರತಿಯ ಕಥೋಲಿಕ್ ಯುವ ಸಂಚಾಲನ ಕಿನ್ನಿಗೋಳಿ ವಾರೊಡೊ, ಹಾಗೂ ಕಿನ್ನಿಗೋಳಿ ಘಟಕದ ಜಂಟೀ ಆಶ್ರಯದಲ್ಲಿ ಕಿನ್ನಿಗೋಳಿ ಚರ್ಚ್ ಸಭಾಂಗಣದಲ್ಲಿ ಭಾನುವಾರ ನಡೆದ ಕೊಂಕಣಿ ಮಾನ್ಯತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ. ವಿನ್ಸಂಟ್ ಮೊಂತೆರೊ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕೊಂಕಣಿ ಕಥೆಗಾರ ನವೀನ್ ಕುಂರ್ಬಿಲ್ ನೂತನ ಕೊಂಕಣಿ ಕೃತಿಯನ್ನು ಬಿಡುಗಡೆಗೊಳಿಸಿ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ಜಿ. ಎಸ್. ಬಿ ಅಧ್ಯಕ್ಷ ಕೆ. ಅಚ್ಚುತ ಮಲ್ಯ, ಕುಡುಬಿ ಸಮಾಜದ ಶೇಖರ ಗೌಡ, ಮಿಲನ್ ಚಾರಿಟೇಬಲ್ ಟ್ರಸ್ಟ್ ನ ಜೇಮ್ಸ್ ಡಿಸೋಜ, ಕಥೊಲಿಕ್ ಸಭಾದ ಅಧ್ಯಕ್ಷ ಹರ್ಬಟ್ ವಿಲಿಯಾಂ ಲೋಬೊ, ಐಸಿವೈಮ್‌ನ ಕ್ವಿನ್‌ಸ್ಟನ್ ಹನಿ ಡಿಕೋಸ್ತಾ, ಮರ್ವಿನ್ ಫರ್ನಾಂಡಿಸ್, ಲಾರೆನ್ಸ್ ಡಿಸೋಜ ಉಪಸ್ಥಿತರಿದ್ದರು. ಕಿನ್ನಿಗೋಳಿ ವಲಯದ ಸಂಚಾಲಕ ಹೆರಿಕ್ ಪಾಯಸ್ ಸ್ವಾಗತಿಸಿದರು. ಪ್ರಮೀಳಾ ಸಲ್ಡಾನಾ ವಂದಿಸಿದರು.

Kinnigoli-25081401

 Konkani Manyatha Divas was commemorated  at Kinnigoli Church Hall on  24th of August Sunday under the aegis of Karnataka Konkani Sahitya Academy with enthusiastic; initiative and coordination from Women’s Organization, Catholic Sabha, and ICYM of Kinnigoli varado.

Mr Roy Castelino, President of Karnataka Konkani Sahithya Academy called upon the konkani people to “shed their inferiority complex and to ensure that the next generation learns and loves our mother tongue”

Kinnigoli Parish priest Rev. Fr. Vincent Montero presided over the function.

Kinnigoli G.S.B. president Mr. Accutha Mallya,  Mr. James D’Souza of Matov Mangalore, Mr. Shekar Gowda and Mr. Lawrence were present.

Konkani writer Mr. Naveen D’Souza Kurmbil was honored and his book “ Devacha Bhagevantheno”    was released by the Chief Guest Mr. Roy Castelino.

Kinnigoli Varado Catholic Sabha President Mr. Herbert William Lobo welcomed the guests, President of Women’s OrganizationMrs.Pramila Saldana proposed the Vote of thanks. Mr. Heric Pais compared the programme.

Comments

comments

Comments are closed.

Read previous post:
ಆ. 26: ಬಿಎಸ್.ಎನ್.ಎಲ್. ಗುತ್ತಿಗೆ ಕಾರ್ಮಿಕರ ಮುಷ್ಕರ

ಕಿನ್ನಿಗೋಳಿ : ದೇಶದಲ್ಲಿನ ಬಿಎಸ್.ಎನ್.ಎಲ್. ಕೇಂದ್ರ ಕಛೇರಿ ಹಾಗೂ ಎಕ್ಸ್‌ಚೆಂಜ್‌ಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರ ಹಲವಾರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ದೆಹಲಿಯ ಅಖಿಲಾ ಭಾರತೀಯ...

Close