ಕಿನ್ನಿಗೋಳಿಯಲ್ಲಿ ಕಿರು ತೆರೆ ನಟ ಸಿಹಿ ಕಹಿ ಚಂದ್ರು

ಕಿನ್ನಿಗೋಳಿ: ಹಿರಿತೆರೆಗಿಂತ ಕಿರುತೆರೆಯಲ್ಲಿ ಕೆಲಸ ಜಾಸ್ತಿಯಾಗಿದ್ದು ಹಿರಿತೆರೆಯಲ್ಲಿ ಕೆಲಸ ಕಮ್ಮಿಯಾದರೂ ತೊಂದರೆ ಜಾಸ್ತಿ ಇತ್ತಿಚಿಗಿನ ದಿನಗಳಲ್ಲಿ ಹಳೆ ಕಾಲದಂತೆ ಸಾಮಾಜಿಕ ಸಂಸಾರಿಕ, ರೋಮ್ಯಾಂಟಿಕ್ ಚಿತ್ರಗಳಿಗೆ ಹೆಚ್ಚು ಮಹತ್ವ ಬರುತ್ತಿರುವುದು ಸಂತಸದ ಸಂಗತಿ. ಕರಾವಳಿಯ ತುಳು ಚಿತ್ರಗಳನ್ನು ಪ್ರೊತ್ಸಾಹಿಸಬೇಕು. ನಾನು ಹಿಂದೆ ನಟಿಸಿದ ಚಿತ್ರಗಳಲ್ಲಿ ಇಲ್ಲಿನ ಕನ್ನಡ ತುಳು ಬಾಷೆಯನ್ನು ಬಳಸಿದ್ದೇನೆ. ತುಳು ಭಾಷಿಗರ ಭಾಷಾ ಪ್ರೇಮದಿಂದ ತುಳು ಚಿತ್ರ ಬೆಳೆಯಲು ಉಳಿಯಲು ಸಾದ್ಯ, ಸದವಕಾಶ ಸಿಕ್ಕಿದರೆ ಖಂಡಿತವಾಗಿಯೂ ತುಳು ಚಿತ್ರದಲ್ಲಿ ನಟಿಸುತ್ತೇನೆ ಎಂದು ಹಿರಿತೆರೆ ಮತ್ತು ಕಿರು ತೆರೆ ನಟ ಸಿಹಿ ಕಹಿ ಚಂದ್ರು ಹೇಳಿದರು
ಕಿನ್ನಿಗೋಳಿ ಸಮೀಪದ ಎಸ್. ಕೋಡಿಯ ಜ್ಯೋತಿಷಿ ವಿಶ್ವನಾಥ ಭಟ್ ಅವರ ಮನೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.
ಬಿ. ಸುರೇಶ್ ಅವರ ನಿರ್ದೇಶನದ “ದೇವರ ನಾಡಿನಲ್ಲಿ” ಚಲನ ಚಿತ್ರದ ಚಿತ್ರೀಕರಣ ಉಡುಪಿ ಪರಿಸರದಲ್ಲಿ ನಡೆಯುತ್ತಿದೆ ಅದರ ಶೂಟಿಂಗ್ ನಲ್ಲಿ ಭಾಗವಹಿಸಲು ಬಂದಿದ್ದೇನೆ.
ಈಗ ಹಾಸ್ಯ ಪಾತ್ರಗಳನ್ನು ಯಾಕೆ ನಿರ್ವಹಿಸುತ್ತಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಹಾಸ್ಯ ತುಂಬಾ ಜಾಸ್ತಿಯಾಯಿತು ಹಾಗೇ ಬಿಟ್ಟೆ ಎಂದು ಜೋಕ್ ಮಾತನಾಡಿದರು ಹಾಗೇನಿಲ್ಲ ಅವಕಾಶಗಳಿವೆ ಆದರೇ ನನಗೆ ಒಪ್ಪುವ ಪಾತ್ರಗಳು ಸಿಗುತ್ತಿಲ್ಲ. ಸದ್ಯಕ್ಕೆ ಪ್ರತಿಭಾ ನಂದಕುಮಾರ್ ಅವರ ಸ್ನೇಕ್ ನಾಗದಲ್ಲೂ ಅಭಿನಯಿಸುತ್ತಿದ್ದೇನೆ, ನನ್ನ ನಿರ್ದೇಶನದ ೨ ಧಾರವಾಹಿಗಳು ಅಲ್ಲದೆ ಅಭಿನಯದ ಒಂದು ದಾರವಾಹಿಯು ಪ್ರಸಾರವಾಗುತ್ತಿದೆ, ಹಿಂದಿ ತಮಿಳು ಮತ್ತು ತೆಲುಗು ಧಾರವಹಿಗಳಲ್ಲೂ ನಟಿಸಿದ್ದೇನೆ, ನಿರ್ದೆಶನದ ಅನುಭವವು ಇದೆ ಎಂದರು. ಬೇರೆ ಬಾಷೆಯ ಚಿತ್ರದಲ್ಲಿ ಅಭಿನಯದ ಬಗ್ಗೆ ಕೇಳಿದಾಗ ಯಾವ ಬಾಷೆಯಲ್ಲೂ ಅಭಿನಯ ಮಾಡಬಾರದು ಎಂದೇನಿಲ್ಲ ಆದರೆ ಅರ್ಥವಾಗದ ಭಾಷೆಯಲ್ಲಿ ನಟನೆಯಲ್ಲಿ ಭಾವನೆಗಳನ್ನು ವ್ಯಕ್ತ ಪಡಿಸಲು ಕಷ್ಟವಾಗುತ್ತದೆ ಎಂದರು
ಬೋಜನ ಪ್ರಿಯ ಕಾರ್ಯಕ್ರಮ ರಾಜ್ಯದ ಹಲವು ಕಡೆ ನಡೆಸಿದ್ದೇನೆ, ಮುಂದಿನ ದಿನಗಳಲ್ಲಿ ಉಡುಪಿ ಮತ್ತು ಮಂಗಳೂರುಗಳಲ್ಲಿ ನಡೆಸುವ ಯೋಜನೆ ಇದೆ ಎಂದರು ತಮ್ಮ ಬೊಳು ತಲೆಯ ವಿಶೇಷತೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ 15 ವರ್ಷ ಹಿಂದೆ ನಿರ್ದೇಶಕರೋಬ್ಬರು ವಿಷ್ಣುವರ್ದನ್ ಅವರ ತಂದೆಯ ಪಾತ್ರ ನಿರ್ವಹಣೆಗೆ ಹೇಳಿದರು, ಆಗ ನಾನು ಹೇಳಿದೆ ನನ್ನ ತಂದೆಯ ವಯಸ್ಸು ವಿಷ್ಟು ಅವರಿಗೆ ಆಗಿದೆ ಅವರ ತಂದೆ ಪಾತ್ರ ನಾನು ನಿರ್ವಹಿಸ ಬಹುದೇ ಎಂಬ ಪ್ರಶ್ನೆಗೆ, ಅಲ್ಲಯ್ಯ ನಿನಗೆ ಕೂದಲು ಕಡಿಮೆ ಇರುವುದರಿಂದ ಅವರ ತಂದೆ ಪಾತ್ರಕ್ಕೆ ಸರಿಯಾಗಿ ಸೂಟ್ ಅಗ್ತಿಯ ಎಂದರು ನಾನು ಹೊರಗೆ ಅಶೋಕ ವೃಕ್ಷದ ಕೆಳಗೆ ಕುಳಿತೆ, ಬುದ್ದನಿಗೆ ಭೋದಿವೃಕ್ಷದ ಕೆಳಗೆ ಜ್ಞಾನೋದಯವಾದಂತೆ ನನಗೆ ಅಶೋಕ ವೃಕ್ಷದ ಕೆಳಗೆ ಜ್ಞಾನೋದಯವಾಯಿತು ಆ ನಂತರ ನಾನು ಒಂದು ತೀರ್ಮಾನಕ್ಕೆ ಬಂದು ಇದ್ದ ಅಲ್ಪ ಸ್ವಲ್ಪ ಕೂದಲನ್ನು ತೆಗೆದು ಬಿಟ್ಟೆ ಈಗ ಜನರು ಅದನ್ನೇ ಇಷ್ಟಪಟ್ಟಿದ್ದಾರೆ. ಎಂದು ಗೊಳ್ಳನೆ ನಕ್ಕು ಹಾಸ್ಯ ಮಯವಾಗಿ ಹೇಳಿದರು.
ಭಾವನೆಯನ್ನು ಕೆರಳಿಸುವ ಚಿತ್ರಗಳ ಬಗ್ಗೆ ನನಗೆ ಅಸಮಾಧಾನವಿದೆ ಇಂತಹ ಚಿತ್ರಗಳು ಸಲ್ಲದು. ಎಂದು ಮಾರ್ಮಿಕವಾಗಿ ನುಡಿದರು.

Kinnigoli-27081403

Comments

comments

Comments are closed.

Read previous post:
Kinnigoli-27081401
ಉಲ್ಲಂಜೆ ಮತ್ತು ಪದ್ಮನೂರು ಕ್ಲಸ್ಟರ್ ಪ್ರತಿಭಾ ಕಾರಂಜಿ

 ಕಿನ್ನಿಗೋಳಿ: ಪ್ರತಿಭಾ ಕಾರಂಜಿಗಳಂತಹ ಚಟುವಟಿಕೆಗಳಲ್ಲಿ ನಾಯಕತ್ವ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ರೂಪುಗೊಳ್ಳುತ್ತದೆ. ಮಕ್ಕಳು ಇದರ ಸದಾವಕಾಶ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ...

Close