ಉಲ್ಲಂಜೆ ಮತ್ತು ಪದ್ಮನೂರು ಕ್ಲಸ್ಟರ್ ಪ್ರತಿಭಾ ಕಾರಂಜಿ

 ಕಿನ್ನಿಗೋಳಿ: ಪ್ರತಿಭಾ ಕಾರಂಜಿಗಳಂತಹ ಚಟುವಟಿಕೆಗಳಲ್ಲಿ ನಾಯಕತ್ವ, ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ರೂಪುಗೊಳ್ಳುತ್ತದೆ. ಮಕ್ಕಳು ಇದರ ಸದಾವಕಾಶ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಹೇಳಿದರು.
ದ.ಕ. ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಸಂಪನ್ಮೂಲ ಕೇಂದ್ರ ಮಂಗಳೂರು ಉತ್ತರ ವಲಯ, ಉಲ್ಲಂಜೆ ಹಾಗೂ ಪದ್ಮನೂರು ಸಮೂಹ ಸಂಪನ್ಮೂಲ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಹಾಗೂ ಮೂಲ್ಕಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಮಂಗಳವಾರ ಪುನರೂರು ಭಾರತ ಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಲ್ಲಂಜೆ ಹಾಗೂ ಪದ್ಮನೂರು ಕ್ಲಸ್ಟರ್ ಮಟ್ಟದ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲ ಪಿ. ಹೆಗ್ಡೆ ಅಧ್ಯಕ್ಷತೆ ವಹಿಸಿದರು.
ಮೂಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಸಿ.ಆರ್.ಪಿ. ಜಗದೀಶ್ ನಾವಡ , ಉದ್ಯಮಿ ಶ್ರೀಕಾಂತ್ ಶೆಟ್ಟಿ, ನಿವೃತ್ತ ಅಧ್ಯಾಪಕ ಗೋಪಾಲ ಶೆಟ್ಟಿಗಾರ್, ವಲೇರಿಯನ್ ತಾವ್ರೊ, ಕಿನ್ನಿಗೋಳಿ ಪಂಚಾಯಿತಿ ಸದಸ್ಯ ಮಾಧವ ಬಂಗೇರ, ಮುಖ್ಯ ಶಿಕ್ಷಕಿ ಸಿಸಿಲಿಯಾ ಕ್ಯಾಸ್ತಲಿನೊ, ಉಪಸ್ಥಿತರಿದ್ದರು.
ಕೃಷ್ಣ ಮೂರ್ತಿ ರಾವ್ ಸ್ವಾಗತಿಸಿ ಬಿ.ಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Kinnigoli-27081401 Kinnigoli-27081402

Comments

comments

Comments are closed.

Read previous post:
Kinnigoli-26081403
ಏಳಿಂಜೆ ಕೆಸರುಗದ್ದೆ ಕ್ರೀಡೋತ್ಸವ

ಕಿನ್ನಿಗೋಳಿ: ಏಳಿಂಜೆ ಪೆರ್ಗುಂಡಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 31 ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪಟ್ಟೆ ಜಾರಂದಾಯ ಬಂಟ ದೈವಸ್ಥಾನದ ಬಳಿ ನಡೆದ ಕೆಸರುಗದ್ದೆ ಕ್ರೀಡೋತ್ಸವವನ್ನು ಪ್ರಗತಿ ಪರ...

Close