ಕಿನ್ನಿಗೋಳಿ ಚರ್ಚ್ ಸಮುದಾಯ ದಿನ ಆಚರಣೆ

ಕಿನ್ನಿಗೋಳಿ: ಪರಸ್ಪರ ಪ್ರೀತಿ ಸೌಹಾರ್ಧತೆಯ ಜೀವನ ಶೈಲಿಯಿಂದ ಸಮುದಾಯದಲ್ಲಿ ಹೆಚ್ಚಿನ ಬಾಂದವ್ಯ ವೃದ್ಧಿಪಡಿಸಲು ಸಾಧ್ಯವಾಗಬಲ್ಲುದು ಎಂದು ಮಂಗಳೂರು ಸೈಂಟ್ ಜೊಸೆಫ್ ಸೆಮಿನೆರಿಯ ರೆಕ್ಟರ್ ಫಾ. ಡಾ. ಜೊಸೆಫ್ ಮಾರ್ಟಿಸ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಚರ್ಚ್ ಸಭಾಭವನದಲಿ ಕಿನ್ನಿಗೋಳಿ ಚರ್ಚ್‌ನ ೧೬ ವಾಡೆಗಳ ಕೂಡುವಿಕೆಯಲ್ಲ್ಲಿ ನಡೆದ ಸಮುದಾಯ ದಿನಾಚರಣೆ ಸಂದರ್ಭ ಮಾತನಾಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ಫಾ| ವಿನ್ಸಂಟ್ ಮೊಂತೆರೊ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಹಿರಿಯ ವೈದ್ಯೆ ಭಗಿನಿ ಡಾ. ಲಿಲಿಯಾನ್ ಅವರನ್ನು ಸನ್ಮಾನಿಸಲಾಯಿತು.
ಫಾ. ವಿಕ್ಟರ್ ಪಿಂಟೊ, ಮೇರಿವೆಲ್ ಕಾನ್ವಂಟಿನ ಭಗಿನಿ ವಿತಾಲಿಸ್, ಸಣ್ಣ ಕ್ರಿಸ್ತ ಸಮುದಾಯದ ಸಂಚಾಲಕ ಮೈಕಲ್ ಪಿಂಟೋ, ಕಿನ್ನಿಗೋಳಿ ಚರ್ಚ್ ಕಾರ್ಯದರ್ಶಿ ರಾಬರ್ಟ್ ಲೋಬೊ ಉಪಸ್ಥಿತರಿದ್ದರು.
ಕಿನ್ನಿಗೋಳಿ ಚರ್ಚ್‌ಸಹಾಯಕ ಧರ್ಮಗುರು ಫಾ| ರಾಯನ್ ಕ್ರಾಸ್ತ ಪ್ರಸ್ತಾವನೆಗೈದರು. ಚರ್ಚ್ ಸಮಿತಿ ಉಪಾಧ್ಯಕ್ಷ ವಿನ್ಸಂಟ್ ಡಿಸೋಜ ಸ್ವಾಗತಿಸಿದರು. ವಿಲಯಂ ಡಿಸೋಜ ಹಾಗೂ ಲೋನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Kinnigoli-31081403

Comments

comments

Comments are closed.

Read previous post:
Kinnigoli-31081402
ಐಕಳ ನಾಗಕಲ್ಲು -ಪ್ರತಿಭಟನೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗಕಲ್ಲು ಪರಿಸರದಲ್ಲಿ ಹೊಸ ಜಲ್ಲಿಕ್ರಷರ್ ಸ್ಥಾಪಿಸುವ ಬಗ್ಗೆ ಇಲಾಖಾ ಸರ್ವೆ ನಡೆದಿದೆ ಇಲ್ಲಿ ಹೊಸ ಕ್ರಷರ್ ಸ್ಥಾಪಿಸುವ ಬಗ್ಗೆ ಸ್ಥಳೀಯ ಗ್ರಾಮಸ್ಥರ...

Close