ಸಮಾಜದಲ್ಲಿ ಸೌಹಾರ್ಧತೆ ಕಾಪಾಡಿಕೊಳ್ಳಬೇಕು

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಧರ್ಮದ ಸಾರವನ್ನು ತಿಳಿದು ಸಮಾಜದ ಎಲ್ಲಾ ವರ್ಗದವರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸೇವಾ ಮನೋಭಾವನೆಯಿಂದ ಮಾಡಿ ಸಮಾಜದ ಸೌಹಾರ್ಧತೆ ಕಾಪಾಡಿಕೊಳ್ಳುವಲ್ಲಿ ಶ್ರಮಿಸಬೇಕು ಎಂದು ಬಾರ್ಕೂರು ಭಾರ್ಗವ ಬೀಡು ಮಹಾಸಂಸ್ಥಾನದ ಶ್ರೀ ವಿದ್ಯಾವಾಚಸ್ಪತಿ ಸಂತೋಷ ಭಾರತಿ ಸ್ವಾಮೀಜಿ ಹೇಳಿದರು.
ಕಿನ್ನಿಗೋಳಿ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಈ ಸಂದರ್ಭ ರಜತ ಪ್ರಭಾವಳಿ ಸರ್ಮಪಿಸಿದ ದಾನಿ ಪ್ರಕಾಶ್ ಶೆಣೈ ದಂಪತಿಗಳನ್ನು , ಶಿಲ್ಪಿ ವಿಠಲ ಆಚಾರ್ಯ ಮಾನಂಪಾಡಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ನಿಶಾ ಪಿರೇರಾ ಅವರನ್ನು ನ್ಮಾನಿಸಲಾಯಿತು.
ಕಿನ್ನಿಗೋಳಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾರಾಯಣ ಅಧ್ಯಕ್ಷತೆ ವಹಿಸಿದ್ದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ , ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಲಯನ್ಸ್ ಕ್ಲಬ್ ಅಧ್ಯಕ್ಷ ಬರ್ಟನ್ ಸಿಕ್ವೇರಾ, ಇಬ್ರಾಹಿಂ ಬಾವ ಗುತ್ತಕಾಡು, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷ ಜನಾರ್ದನ ಕಿಲೆಂಜೂರು, ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಂಘ ಅಧ್ಯಕ್ಷ ಕೆ. ದಿನೇಶ್ ಆಚಾರ್ಯ, ರೋಟರ‍್ಯಾಕ್ಟ್ ಅಧ್ಯಕ್ಷ ಸಂತೋಷ್ ಶೆಟ್ಟಿ , ಸಮಿತಿಯ ಭುವನಾಭಿರಾಮ ಉಡುಪ, ನಾಮದೇವ ಕಾಮತ್, ಕೆ. ಬಿ. ಸುರೇಶ್, ಶಂಕರ ಬಿ. ಕೋಟ್ಯಾನ್, ಶರತ್ ಶೆಟ್ಟಿ , ಸುಮಿತ್ ಕುಮಾರ್, ಪಿ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-31081405

Comments

comments

Comments are closed.

Read previous post:
Kinnigoli-31081404
ಉಚಿತ ನೇತ್ರ ತಪಸಣಾ ಶಿಭಿರ

ಕಿನ್ನಿಗೋಳಿ: ದ. ಕ. ಅಂಧರ ಸೇವಾ ಸಂಘ ಮಂಗಳೂರು ಮತ್ತು ಮೂಲ್ಕಿ ಬಂಟರ ಸಂಘ ಮಹಿಳಾ ವಿಭಾಗದ ಆಶ್ರಯದಲ್ಲಿ ಅಂಧರ ಸೇವಾ ಸಂಘದ 193 ನೇ ನೇತ್ರ ತಪಾಸಣಾ...

Close