ಗ್ರಾಹಕರಿಗೆ ತ್ವರಿತವಾಗಿ ಸ್ಪಂದಿಸಬೇಕು

ಕಿನ್ನಿಗೋಳಿ: ಸಾರ್ವಜನಿಕರು ಹಾಗೂ ಗ್ರಾಹಕರ ಕುಂದು ಕೊರತೆ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿದಾಗ ಸಮಾಜ ಗುರುತಿಸಿ ಗೌರವಿಸಿ ಅಭಿನಂದಿಸುತ್ತಾರೆ ಎಂದು ಮೆಸ್ಕಾಂ ಸುರತ್ಕಲ್ ವಲಯ ಸಹಾಯಕ ಇಂಜಿನಿಯರ್ ಅಭಿಷೇಕ್ ಹೇಳಿದರು.
ಶನಿವಾರ ಮೆಸ್ಕಾಂನ ಕಿನ್ನಿಗೋಳಿ ಶಾಖಾಯ ಶಾಖಾಧಿಕಾರಿ ಇಲಿಯಾಸ್ ಅವರ ನಿವೃತ್ತಿ ವಿದಾಯ ಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಕಿನ್ನಿಗೋಳಿ ಶಾಖೆ, ಮೂಲ್ಕಿ ಶಾಖೆ ಹಾಗೂ ಸಾರ್ವಜನಿಕ ರ ಪರವಾಗಿ ಇಲಿಯಾಸ್ ಅವರನ್ನು ಗೌರವಿಸಲಾಯಿತು.
ಕುಳೂರು ಉಪವಿಭಾಗ ಸಹಾಯಕ ಇಂಜಿನಿಯರ್ ರುದ್ರ ಸ್ವಾಮಿ, ಮೆಸ್ಕಾಂ ನೌಕರ ಸಂಘದ ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಗುರು ಮೂರ್ತಿ, ಲೆಕ್ಕಾಧಿಕಾರಿ ದಿನೇಶ್, ಸಂಘದ ಪದಾಧಿಕಾರಿಗಳಾದ ರಹಮತ್, ಭೋಜ ಬಂಗೇರ , ನಾಗರಾಜ್, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕುಶಲ, ರೈತ ಹಿತರಕ್ಷಣಾ ಸಮತಿಯ ಅಧ್ಯಕ್ಷ ಶ್ರೀಧರ ಶೆಟ್ಟಿ, ಸುಧಾಕರ, ಪ್ರಕಾಶ್ ಉಪಸ್ಥಿತರಿದ್ದರು.

Kinnigoli-31081401

Comments

comments

Comments are closed.

Read previous post:
Kinnigoli-300814-iKinnigoli
ಕಿನ್ನಿಗೋಳಿ ಪರಿಸರದಲ್ಲಿ ಗಣೇಶೋತ್ಸವ

 ಕಿನ್ನಿಗೋಳಿ: 40 ನೇ ವರ್ಷದ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ  21 ನೇ ವರ್ಷದ ಪಕ್ಷಿಕೆರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ  28 ನೇ ವರ್ಷದ ರಾಜರತ್ನಪುರ...

Close