ಐಕಳ ನಾಗಕಲ್ಲು -ಪ್ರತಿಭಟನೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗಕಲ್ಲು ಪರಿಸರದಲ್ಲಿ ಹೊಸ ಜಲ್ಲಿಕ್ರಷರ್ ಸ್ಥಾಪಿಸುವ ಬಗ್ಗೆ ಇಲಾಖಾ ಸರ್ವೆ ನಡೆದಿದೆ ಇಲ್ಲಿ ಹೊಸ ಕ್ರಷರ್ ಸ್ಥಾಪಿಸುವ ಬಗ್ಗೆ ಸ್ಥಳೀಯ ಗ್ರಾಮಸ್ಥರ ವಿರೋಧ ಹಾಗೂ ಪ್ರತಿಭಟನೆ ಭಾನುವಾರ ನಡೆಯಿತು.
ಕಳೆದ ಕೆಲವು ದಿನಗಳ ಹಿಂದೆ ಸ್ಥಳೀಯ ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಅಲ್ಲದೆ ವಿಶ್ವಾಸಕ್ಕೆ ತೆಗೆದು ಕೊಳ್ಳದೆ ಗಣಿ ಇಲಾಖೆಯ ಅಧಿಕಾರಿಗಳು ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಕಲ್ಲು ಬಳಿ ನೂತನ ಜಲ್ಲಿ ಕ್ರಷರ್ ಸ್ಥಾಪಿಸುವ ಬಗ್ಗೆ ಸರ್ವೆ ನಡೆಸಿದ್ದಾರೆ ಎಂದು ಐಕಳ ಪರಿಸರ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಸುಧಾಮ ಶೆಟ್ಟಿ ತಿಳಿಸಿದ್ದಾರೆ.
ನಾಗಕಲ್ಲು ಪರಿಸರದಲ್ಲಿ 300 ಕ್ಕೂ ಮಿಕ್ಕಿ ಮನೆಗಳಿದ್ದು ಪಕ್ಕದಲ್ಲಿಯೇ ಐತಿಹಾಸಿಕ ಕಾಂತಾಬಾರೆ -ಬೂದಬಾರೆ ಕಂಬಳ ಹಾಗೂ ಬ್ರಹ್ಮಸ್ಥಾನ, ಶಾಲೆ, ದೈವಸ್ಥಾನ ಇದ್ದು ಹೆಚ್ಚಿನ ಜನರು ಕೃಷಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಆದ್ದರಿಂದ ಪರಿಸರದಲ್ಲಿ ಬೃಹತ್ ಮೊಬಲ್ ಕ್ರಷರ್ ನಡೆಸುವ ಅವಕಾಶ ನೀಡಿದರೇ ನಮ್ಮ ಬದುಕು ಕಷ್ಟ ಸಾಧ್ಯವಾಗಲಿದೆ ಎಂದು ಸಮಿತಿಯ ಸಲಹೆಗಾರ ಕಿಟ್ಟ ತಿಳಿಸಿದ್ದಾರೆ.

ಐಕಳ ಗ್ರಾಮ ಪಂಚಾಯಿತಿಗೂ ಮೊಬೈಲ್ ಕ್ರಷರ್ ಸ್ಥಾಪಿಸುವ ಬಗ್ಗೆ ನಿಖರ ಮಾಹಿತಿ ಬಂದಿಲ್ಲ ಇಂತಹ ಘಟಕ ನಡೆಸಲು ಅವಕಾಶ ನೀಡುವುದಿಲ್ಲ ಇಲ್ಲಿ 40-60 ಎಚ್. ಪಿ. ಸಾಮರ್ಥ್ಯದ ಘಟಕ ಮಾತ್ರ ಇದೆ ಎಂದು ಗ್ರಾ. ಪಂ. ಸದಸ್ಯ ಯೋಗೀಶ್ ಕೋಟ್ಯಾನ್ ತಿಳಿಸಿದ್ದಾರೆ.
ಗ್ರಾಮಸ್ಥರಿಗೆ ತೊಂದರೆಯಾಗದ ರೀತಿಯಲ್ಲಿ ಇದುವರೆಗೆ ಪರಿಸರದಲ್ಲಿ 11 ಚಿಕ್ಕ ಕಲ್ಲಿನ ಕೋರೆಗಳು ಕಾರ್ಯನಿರ್ವಹಿಸುತ್ತಿದ್ದು ಹೊಸ ಮೊಬೈಲ್ ಕ್ರಷರ್ ಕಲ್ಲಿನ ಕೋರೆಗೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಸಮಿತಿಯ ಕಾರ್ಯದರ್ಶಿ ವಿಜಯಕುಮಾರ್, ಶೇಖರ್, ಲೀನಾ, ಸೆವರಿನ್, ಲಾರೆನ್ಸ್ ಡಿಸೋಜ, ಗ್ರಾ. ಪಂ. ಮಾಜಿ ಸದಸ್ಯೆ ಜಯಂತಿ, ಅಂಬಿಕಾ ಪ್ರಸಾದ್ ಮತ್ತಿತರು ಉಪಸ್ಥಿತರಿದ್ದರು.

Kinnigoli-31081402

Comments

comments

Comments are closed.

Read previous post:
Kinnigoli-31081401
ಗ್ರಾಹಕರಿಗೆ ತ್ವರಿತವಾಗಿ ಸ್ಪಂದಿಸಬೇಕು

ಕಿನ್ನಿಗೋಳಿ: ಸಾರ್ವಜನಿಕರು ಹಾಗೂ ಗ್ರಾಹಕರ ಕುಂದು ಕೊರತೆ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿದಾಗ ಸಮಾಜ ಗುರುತಿಸಿ ಗೌರವಿಸಿ ಅಭಿನಂದಿಸುತ್ತಾರೆ ಎಂದು ಮೆಸ್ಕಾಂ ಸುರತ್ಕಲ್ ವಲಯ ಸಹಾಯಕ ಇಂಜಿನಿಯರ್ ಅಭಿಷೇಕ್ ಹೇಳಿದರು....

Close