ಜನಾಧನ್ ಯೋಜನೆಯ ಬಗ್ಗೆ ಮಾಹಿತಿ ಶಿಬಿರ

ಮೂಲ್ಕಿ: ಗ್ರಾಮೀಣ ಪರಿಸರದ ಬಡ ಜನರು ಸಾಲದ ಹೊರೆಯಿಂದ ಮುಕ್ತರಾಗಿ ಸ್ವತಂತ್ರ ಜೀವನ ನಡೆಸಲು ಶ್ಯೂನ್ಯ ಮೊತ್ತದ ಬ್ಯಾಂಕ್ ಖಾತೆಗಳ ಮೂಲಕ ಸಹಕರಿಸಲು ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಜನಾಧನ್ ಯೋಜನೆಯನ್ನು ಪ್ರಾರಂಬಿಸಿದೆ ಎಂದು ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಹೇಳಿದರು. ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ಜನಾಧನ್ ಯೋಜನೆಯ ಬಗ್ಗೆ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೂಲ್ಕಿ ಸಿಂಡಿಕೇಟ್ ಬ್ಯಾಂಕಿನ ಹಿರಿಯ ಪ್ರಬಂಧಕರಾದ ಮಂಜುನಾಥ ಕೆ.ವಿ. ಇವರು ಜನಾಧನ್ ಯೋಜನೆಯ ಉದ್ದೇಶ ಹಾಗೂ ಉಪಯೋಗದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿ, ಸಭಿಕರ ಪ್ರಶ್ನೆಗಳಿಗೆ ಸೂಕ್ತ ಮಾಹಿಯನ್ನು ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುನಿಲ್ ಆಳ್ವ ಯೋಜನೆಯ ಬಗ್ಗೆ ವಿವರಣೆ ನೀಡಿದರು. ಉಪಾಧ್ಯಕ್ಷರಾದ ವಸಂತಿ ಭಂಡಾರಿ ಹಾಗೂ ನಗರ ಪಂಚಾಯತಿ ಸದಸ್ಯರು, ಸಿಂಡಿಕೇ ಟ್ ಬ್ಯಾಂಕ್ ವಿಜಯಾ ಕಾಲೇಜು ಬ್ರಾಂಚಿನ ವನಜಾ, ಸಿಡಿಎಸ್ ಅಧ್ಯಕ್ಷರಾದ ವತ್ಸಲಾ ವಿ. ಬಂಗೇರ ಮತ್ತು ಸ್ವಸಹಾಯ ಸಂಘದ ಸದಸ್ಯರು ಮತ್ತು ಸಮುದಾಯ ಸಂಘಟಕರಾದ ಪ್ರಸನ್ನಕುಮಾರ್ ಉಪಸ್ಥಿತರಿದ್ದರು. ಮುಲ್ಕಿ ನಗರ ಪಂಚಾಯತ್‌ನ ಕಿರಿಯ ಅಭಿಯಂತರರಾದ ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.

Kinnigoli-01091401

Bhagyawan Sanil

Comments

comments

Comments are closed.

Read previous post:
Kinnigoli-31081405
ಸಮಾಜದಲ್ಲಿ ಸೌಹಾರ್ಧತೆ ಕಾಪಾಡಿಕೊಳ್ಳಬೇಕು

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಧರ್ಮದ ಸಾರವನ್ನು ತಿಳಿದು ಸಮಾಜದ ಎಲ್ಲಾ ವರ್ಗದವರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಸೇವಾ ಮನೋಭಾವನೆಯಿಂದ ಮಾಡಿ ಸಮಾಜದ ಸೌಹಾರ್ಧತೆ ಕಾಪಾಡಿಕೊಳ್ಳುವಲ್ಲಿ ಶ್ರಮಿಸಬೇಕು ಎಂದು ಬಾರ್ಕೂರು...

Close