ಶಾಲಾ ಶಿಕ್ಷಕರ ಪ್ರತಿಭಾ ಸ್ಪರ್ದೆ ವೈವಿಧ್ಯ-2014

ಮೂಲ್ಕಿ: ಮೂಲ್ಕಿ ವಲಯ ಹಾಗೂ ಮೂಲ್ಕಿ ರೋಟರಿ ಇಂಟರ‍್ಯಾಕ್ಟ್ ಕ್ಲಬ್ ಶಾಲಾ ಶಿಕ್ಷಕರ ಪ್ರತಿಭಾ ಸ್ಪರ್ದೆ ವೈವಿಧ್ಯ-2014 ರ ಸಮಗ್ರ ಪ್ರಶಸ್ತಿಯನ್ನು ಮೂಲ್ಕಿಕಿಲ್ಪಾಡಿ ಬೆಥನಿ ಅಂಗ್ಲ ಮಾದ್ಯಮ ಶಾಲೆ ಪಡೆದುಕೊಂಡಿತು. ಕಾರ್ನಾಡುಸಿಎಸ್‌ಐ ಆಂಗ್ಲ ಮಾದ್ಯಮ ಶಾಲೆ ದ್ವಿತೀಯ ಸ್ಥಾನಿಯಾಯಿತು.
ಅಶುನಟನೆ: ಪ್ರಥಮ ಬೆಥನಿ,ದ್ವಿತೀಯ:ಶ್ರೀನಾರಾಯಣ ಗುರು ಮೂಲ್ಕಿ.ಆಶು ಭಾಷಣ: ಪ್ರಥಮ ಬೆಥನಿ,ದ್ವಿತೀಯ:ಮೂಲ್ಕಿ ಸರಕಾರಿ ಪದವಿಪೂರ್ವ ಕಾಲೇಜು.ನೃತ್ಯ: ಪ್ರಥಮ ಸಿಎಸ್‌ಐ.ದ್ವಿತೀಯ:ಬೆಥನಿ.ಭಕ್ತಿಗೀತೆ: ಪ್ರಥಮ ಬೆಥನಿ, ದ್ವಿತೀಯ:ಎಂ.ಆರ್.ಎಸ್.ಎಂ ತೋಕೂರು. ಸಮೂಹ ನೃತ್ಯ: ಪ್ರಥಮ ಬೆಥನಿ, ದ್ವಿತೀಯ: ಸಿಎಸ್‌ಐ.ಕಿರು ಪ್ರಹಸನ ಪ್ರಥಮ:ಬೆಥನಿ,ದ್ವಿತೀಯ ಆಲ್ ಅಝಾರ್ ಹೆಜಮಾಡಿ, ಲಕ್ಕಿ ಟೀಚರ್; ನವೀತಾ ಬೆಥನಿ ಗಳಿಸಿದರು.
ಉದ್ಘಾಟನೆ: ಉಡುಪಿ ಜಿಲ್ಲಾ ಪ್ರೌಡ ಶಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಶಿಕ್ಷಕರ ಪ್ರತಿಭಾ ಸ್ಪರ್ದೆ ವೈವಿಧ್ಯ-2014 ಉದ್ಘಾಟಿಸಿ, ಪರಿಣಾಮಕಾರಿ ಶಿಕ್ಷಣ ನೀಡಲು ಶಿಕ್ಷಕರು ಶೃಜನಶೀಲರಾಗಿ ಅಧ್ಯಯನಶೀಲರಾಗಿರುವುದು ಬಹಳ ಮುಖ್ಯವಾಗಿದ್ದು ಶಿಕ್ಷಕರ ಪ್ರತಿಭೆಯನ್ನು ಹೆಚ್ಚಿಸಲು ಅವರಿಗೆ ಪ್ರತಿಭಾ ಸ್ಪರ್ದೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗುವಂತೆ ಮಾಡಿರುವ ಮೂಲ್ಕಿ ರೋಟರಿ ಕಾರ್ಯ ಸ್ತುತ್ಯರ್ಹ ಎಂದರು. ವಿಜೇತ ಶಿಕ್ಷಕರಿಗೆ ಬಹುಮಾನವನ್ನು ಜೋನ್ ಜೂಲಿಯಸ್ ಡಿಸೋಜಾ ವಿತರಿಸಿದರು.
ಸಹಾಯಕ ಗವರ್ನರ್ ಎಂ.ಜಿ.ನಾಗೇಂದ್ರ, ವಲಯ ಸೇನಾನಿ ಶರತ್ ಶೆಟ್ಟಿ, ಕಾರ್ಯದರ್ಶಿ ವಿಲ್‌ಹೆಲ್ಮ್ ಮಾಬೆನ್,ಕಾರ್ಯಕ್ರಮ ನಿರ್ದೇಶಕರಾದ ವೈ,ಎನ್.ಸಾಲ್ಯಾನ್,ಜೆಸಿ ಸಾಲ್ಯಾನ್ ಉಪಸ್ಥಿತರಿದ್ದರು.
ಶ್ರೀನಿವಾಸ ರಾವ್ ಕಾಪು,ರೇಣುಕಾ ಪಡುಬಿದ್ರಿ,ಅಕ್ಷತಾ ಶಿರ್ವ ತೀರ್ಪುಗಾರರಾಗಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ರೋಟರಿ ಅಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜಾ ವಹಿಸಿದ್ದರು. ಅಶೋಕ್ ಕುಮಾರ್ ಶೆಟ್ಟಿ, ಟಿ ಗೋಪಾಲ ಭಂಡಾರಿ ಮತ್ತು ವಿಷ್ಣು ಮೂರ್ತಿ ಸ್ಪರ್ದೆಮತ್ತು ಸಭಾ ಕಾರ್ಯಕ್ರಮ ನಿರೂಪಿಸಿದರು. ವೈಎನ್ ಸಾಲ್ಯಾನ್ ವಂದಿಸಿದರು.Kinnigoli-01091412

Bhagyavan Salian

Comments

comments

Comments are closed.

Read previous post:
Kinnigoli-01091410
ಕೊಳಚಿಕ೦ಬಳ- ಚೌತಿ ಪೂಜೆ

ಮುಲ್ಕಿ: ಮುಲ್ಕಿಯ ಕೊಳಚಿಕ೦ಬಳದ ಶ್ರೀ ಜಾರ೦ದಾಯ ದೈವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಶ್ರೀ ಜಾರ೦ದಾಯ ಹಾಗೂ ಶ್ರೀ ಧೂಮಾವತಿ ದೈವಗಳ ದರ್ಶನ ಮತ್ತು ಚೌತಿ ಪೂಜೆಯು ಜರಗಿತು. Prakash...

Close