ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್

ಕಿನ್ನಿಗೋಳಿ: ಕಟೀಲು ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ದ.ಕ. ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯ ಕ್ರೀಡಾ ಕೂಟವನ್ನು ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಉದ್ಘಾಟಿಸಿದರು.
ಈ ಸಂದರ್ಭ ಕಟೀಲು ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜಾ, ದೈಹಿಕ ಶಿಕ್ಷಣ ನಿರ್ದೇಶಕರಾದ ಜಯರಾಮ ರೈ, ವಿಜಯ ಕುಮಾರ್ ಶೆಟ್ಟಿ, ಉಪನ್ಯಾಸಕ ಗೋಪೀನಾಥ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಪುರುಷರ ವಿಭಾಗ ಹಾಗೂ ಮಹಿಳೆಯರ ವಿಭಾಗದ ಪ್ರಥಮ ಪ್ರಶಸ್ತಿಯನ್ನು ಮಂಗಳೂರು ಗ್ರಾಮಾಂತರ ತಾಲೂಕು ಪ್ರತಿನಿಧಿತ್ವದ ಮೂಡಬಿದ್ರಿ ಆಳ್ವಾಸ್ ಪಿಯು ಕಾಲೇಜು ಗಳಿಸಿದೆ, ಪುರುಷರ ವಿಭಾಗದ ದ್ವಿತೀಯ ಪ್ರಶಸ್ತಿಯನ್ನು ಬೆಳ್ತಂಗಡಿ ತಾಲೂಕು ಪ್ರತಿನಿಧಿತ್ವದ ಉಜಿರೆ ಎಸ್.ಡಿ.ಎಂ. ಪಿಯು ಕಾಲೇಜು ತಂಡ ಹಾಗೂ ಮಹಿಳೆಯರ ವಿಭಾಗದ ದ್ವಿತೀಯ ಪ್ರಶಸ್ತಿಯನ್ನು ಬೆಳ್ತಂಗಡಿ ತಾಲೂಕು ಪ್ರತಿನಿಧಿತ್ವದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪಿ.ಯು. ಕಾಲೇಜು ತಂಡ ಗಳಿಸಿದೆ.

Kinnigoli-0409201403

Comments

comments

Comments are closed.

Read previous post:
Kinnigoli-0409201402
2014 ಪದ್ಮನೂರು ಮತ್ತು ಉಲ್ಲಂಜೆ ಕ್ಲಸ್ಟರ್ ಪ್ರತಿಭಾ ಕಾರಂಜಿ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  2014 ರ ಪದ್ಮನೂರು ಮತ್ತು ಉಲ್ಲಂಜೆ ಕ್ಲಸ್ಟರ್ ಪ್ರತಿಭಾ ಕಾರಂಜಿಯನ್ನು ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ...

Close