ಅಂಗರಗುಡ್ಡೆ : ನಳಿನ್‌ಕುಮಾರ್ ಕಟೀಲು ಭೇಟಿ

 ಕಿನ್ನಿಗೋಳಿ : ಈ ವರ್ಷದ ಮಳೆಗಾಲದಲ್ಲಿ ಕೆಂಚನಕೆರೆಯ ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದ ಸಹಿತ ಜಿಲ್ಲೆಯ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಪೊಲೀಸ್ ಆಯುಕ್ತರಲ್ಲಿ ಈ ಬಗ್ಗೆ ಚರ್ಚಿಸಿ ರಾತ್ರಿ ವೇಳೆಯ ನಿಯಮಿತವಾಗಿ ಗಸ್ತು ನಡೆಸುವ ಬಗ್ಗೆ ಸೂಚನೆ ನೀಡಲಾಗುವುದು ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದರು.
ಕೆಂಚನೆಕರೆ ಸಮೀಪದ ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರಕ್ಕೆ ಗುರುವಾರ ಭೇಟಿ ನೀಡಿ ಮಾಧ್ಯಮ ಮಿತ್ರರಲ್ಲಿ ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿದ್ದರೂ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿ ಕಾನೂನು ಸುವ್ಯವಸ್ಥೆ ಕಾಪಾಡಿ ಧಾರ್ಮಿಕ ಕೇಂದ್ರಗಳಿಗೆ ಬಗ್ಗೆ ನಿಗಾ ವಹಿಸಲು ಜಿಲ್ಲೆಯ ಎಲ್ಲಾ ಠಾಣೆಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸಲಹೆ ನೀಡಲಾಗುವುದು ಎಂದು ತಿಳಿಸಿದರು.
ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳಲ್ಲಿ ಏನು ಸಾಧಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಂಸದರು ವರ್ಷಕ್ಕೆ 12 ಸಬ್ಸಿಡಿ ಗ್ಯಾಸ್ ಸಂಪರ್ಕ, ಜನಧನ ಕಾರ್ಯಕ್ರಮ ಶೌಚಾಲಯ ಮುಕ್ತ ಭಾರತ ಯೋಜನೆಗಳಿವೆ. ಕೆಲವೊಂದು ಯೋಜನೆಗಳು ಹಿನ್ನಡೆ ಕಂಡಿರಬಹುದು. ಆದರೆ ಮುಂದಿನ ದಿನದಲ್ಲಿ ಈ ಬಗ್ಗೆ ಕ್ರಮ ಕೈಗೊಂಡು ಯೋಜನೆಗಳು ತ್ವರಿತ ಗತಿಯಲ್ಲಿ ಆಗುವಂತೆ ನೋಡಿಕೊಳ್ಳಲಾಗುವುದು.
ಪ್ರಧಾನಿ ನರೇಂದ್ರ ಮೋದಿಯವರ ಪ್ರತಿ ಸಂಸದರ ಕ್ಷೇತ್ರದಲ್ಲಿ ಮಾದರಿ ಗ್ರಾಮದ ಪರಿಕಲ್ಪನೆಯ ಕಾರ್ಯಕ್ರಮವನ್ನು ಜಯಪ್ರಕಾಶ ನಾರಾಯಣ್‌ರವರ ಜನ್ಮ ದಿನಾಚರಣೆಯ ಅಕ್ಟೋಬರ್ 11ರಂದು ಈ ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಒಂದು ವರ್ಷದಲ್ಲಿ ಒಂದು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಪರಾರ್ಮಶಿಸಿ ಸೂಕ್ತ ಗ್ರಾಮ ಆಯ್ಕೆ ಮಾಡಲಾಗುವುದು. ಐದು ವರ್ಷದ ಅವಧಿಯಲ್ಲಿ ಐದು ಗ್ರಾಮವನ್ನು ಈ ಯೋಜನೆಯಲ್ಲಿ ರೂಪಿಸಲಾಗುವುದು. ಎಂದು ಸಂಸದ ನಳಿನ್‌ಕುಮಾರ್ ಕಟೀಲು ಹೇಳಿದರು.
ಕಟೀಲು ದೇವಸ್ಥಾನದ ಅಭಿವೃದ್ಧಿ ಇಲಾಖಾವಾರು ಸಮಸ್ಯೆ, ಕಾನೂನು ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ ಕುಂಠಿತಗೊಂಡಿದ್ದು ಕಟೀಲು ದೇವಳದ ಭಕ್ತರ ಭೇಡಿಕೆಯಂತೆ ಆಡಳಿತಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿ, ಜನಪ್ರತಿನಿಧಿಗಳ ವಿಶೇಷ ಸಭೆಯನ್ನು ನಡೆಸಿ ಚರ್ಚಿಸಿ ಯೋಜನೆಗಳು ತ್ವರಿತಗತಿಯಿಂದ ನಡೆಯುವಂತೆ ನೋಡಿಕೊಳ್ಳಲಾಗುವುದು. ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸ್ಥಳೀಯ ಗ್ರಾಮಸ್ಥೆ ಲಲಿತಾದಾಸ್ ಆರೋಗ್ಯದ ಬಗ್ಗೆ ನೀಡಿದ ಮನವಿ ಹಾಗೂ ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರದ ಭರವಸೆ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ ಕಟೀಲು, ಮುಲ್ಕಿ ಮೂಡಬಿದ್ರಿ ಕ್ಷೇತ್ರದ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದೇವಪ್ರಸಾದ ಪುನರೂರು, ಕಿಲ್ಪಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿಗಾರ್, ಯುವ ಮೋರ್ಛಾದ ಜೀವನ್ ಶೆಟ್ಟಿ, ಶೋಭೇಂದ್ರ ಸಸಿಹಿತ್ಲು, ಸಂತೋಷ್ ಶೆಟ್ಟಿ, ಭಜನಾ ಮಂದಿರದ ಅಧ್ಯಕ್ಷ ವಿಜಯಕುಮಾರ್, ತಾರಾನಾಥ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.

Kinnigoli-05091403 Kinnigoli-05091404

Comments

comments

Comments are closed.

Read previous post:
Kinnigoli-05091402
ಸಮಾಜದಲ್ಲಿ ಸಮಬಾಳು ಇರಬೇಕು

ಕಿನ್ನಿಗೋಳಿ : ಸಮಾಜದಲ್ಲಿ ಸಮಾನ ಗೌರವ, ಹಕ್ಕು, ಸಮಪಾಲು, ಸಮಬಾಳು ಇರುವಂತೆ ನೋಡಿಕೊಳ್ಳುವುದು ಪ್ರತಿಯೋರ್ವನ ಕರ್ತವ್ಯ. ನಡುಗೋಡು ಸಂಘವು ಪ್ರಸ್ತುತ ವರ್ಷದಲ್ಲಿ ಹಾಲು ಉತ್ಪಾದನೆಯಲ್ಲಿ ಉತ್ತಮ ಸಾಧನೆಗೈದಿದ್ದು ಮುಂದಿನ...

Close