ಸಮಾಜದಲ್ಲಿ ಸಮಬಾಳು ಇರಬೇಕು

ಕಿನ್ನಿಗೋಳಿ : ಸಮಾಜದಲ್ಲಿ ಸಮಾನ ಗೌರವ, ಹಕ್ಕು, ಸಮಪಾಲು, ಸಮಬಾಳು ಇರುವಂತೆ ನೋಡಿಕೊಳ್ಳುವುದು ಪ್ರತಿಯೋರ್ವನ ಕರ್ತವ್ಯ. ನಡುಗೋಡು ಸಂಘವು ಪ್ರಸ್ತುತ ವರ್ಷದಲ್ಲಿ ಹಾಲು ಉತ್ಪಾದನೆಯಲ್ಲಿ ಉತ್ತಮ ಸಾಧನೆಗೈದಿದ್ದು ಮುಂದಿನ ವರ್ಷಗಳಲ್ಲಿ ನುರಿತ ತಂತ್ರಜ್ಞರ ಮಾಹಿತಿ ಹಾಗೂ ವೈಜ್ಞಾನಿಕ ರೀತಿಯ ಸಲಹೆ ಪಡೆದು ಕಾರ್ಯಾಚರಿಸಿದಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಕಾಣಬಹುದು ಎಂದು ದ.ಕನ್ನಡ ಹಾಲು ಮಹಾ ಮಂಡಳಿಯ ನಿವೃತ್ತ ವ್ಯವಸ್ಥಾಪಕ ಡಿ.ಎಸ್. ಹೆಗ್ಡೆ ಹೇಳಿದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಮಂಗಳೂರು ಮತ್ತು ನಡುಗೋಡು ಹಾಲು ಉತ್ಪಾದಕರ ಸಹಕಾರಿ ನಿಯಮಿತ ಸಂಘದ ಜಂಟೀ ಆಶ್ರಯದಲ್ಲಿ ನರ್ಬಾಡ್ ಯೋಜನೆಯಡಿಯಲ್ಲಿ ಸಂಘದ ಸಭಾಭವನದಲ್ಲಿ ಬುಧವಾರ ನಡೆದ ಯುವ ಮತ್ತು ಮಹಿಳೆಯರಿಗೆ ಹೈನುಗಾರಿಕಾ ಮಾಹಿತಿ ಶಿಬಿರದಲ್ಲಿ ಮಾತನಾಡಿದರು.
ನಂತರ 2013-14 ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ನಡೆಯಿತು. ಈ ಸಂದರ್ಭ ನಡುಗೋಡು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ತಾರನಾಥ ಶೆಟ್ಟಿ, ಕಾರ್ಯದರ್ಶಿ ಲತಾ ಶೆಟ್ಟಿ, ಹಾಲು ಉತ್ಪಾದಕರ ಸಂಘದ ವ್ಯವಸ್ಥಾಪಕ ಪ್ರಭಾಕರ್, ವಿಸ್ತಾರಣಾಧಿಕಾರಿ ದೇವರಾಜ್, ಪಶು ವೈದ್ಯಾಧಿಕಾರಿ ಶ್ರೀನಿವಾಸ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು, ಪದ್ಮನಾಭ ಮಾಡ, ಸಂಜೀವ ಶೆಟ್ಟಿ ಉಪಸ್ಥಿತರಿದ್ದರು

Kinnigoli-05091402

Comments

comments

Comments are closed.

Read previous post:
Kinnigoli-05091401
ಪಕ್ಷಿಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕ ಸಭೆ

ಪಕ್ಷಿಕೆರೆ : ಪಕ್ಷಿಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ವಿದ್ಯಾರ್ಥಿನಿ ನಿಶಾ ಪಿರೇರಾ ಹಾಗೂ ರಿಕ್ಷಾ ಚಾಲಕ -ಮಾಲಕರ ಸಂಘದ ಅಧ್ಯಕ್ಷ ಲೋಹಿದಾಸ್ ಅವರನ್ನು...

Close