ಕೆಮ್ರಾಲ್ : ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ

ಕಿನ್ನಿಗೋಳಿ: ಸಾವಯವಯುಕ್ತ ಆಹಾರ ಪದಾರ್ಥಗಳನ್ನು ಅವಲಂಬಿಸಿದಾಗ ಉತ್ತಮ ಪೌಷ್ಟಿಕ ಆಹಾರ ಸಿಗುವುದು ಹಾಗೂ ಆರೋಗ್ಯ ಸುಧೃಡವಾಗುವುದು. ಮಕ್ಕಳಿಗೆ ನಿಯಮಿತ ಪೌಷ್ಟಿಕ ಆಹಾರ ನೀಡುವುದು ಹಿರಿಯರ ಆದ್ಯ ಕರ್ತವ್ಯ ಎಂದು ಸಿವಿಲ್ ಕೋರ್ಟ್ ನ್ಯಾಯಾದೀಶ ಗಣೇಶ್ ಹೇಳಿದರು.
ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಹಾರ ಇಲಾಖೆಯ ಜಂಟೀ ಆಶ್ರಯದಲ್ಲಿ ಗುರುವಾರ ಕೆಮ್ರಾಲ್ ಪ್ರೌಢ ಶಾಲೆಯಲ್ಲಿ ನಡೆದ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು
ಈ ಸಂದರ್ಭ ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಅಶೋಕ್ ಅರಿಗ, ಆಹಾರ ಇಲಾಖೆಯ ಶಿವದರ್ಶನ್ ತ್ರಿಪಾಠಿ, ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಭಾಸ್ಕರ್ ಕೋಟ್ಯಾನ್, ಕೆಮ್ರಾಲ್ ಗ್ರಾಮಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಮುಲ್ಕಿ ಸಹಾಯಕ ಠಾಣಾಧಿಕಾರಿ ಪರಮೇಶ್ವರ್, ಶಿಶು ಅಭಿವ್ರೃದ್ದಿ ಅಧಿಕಾರಿ ಶೋಭಾ, ಕೆಮ್ರಾಲ್ ಗ್ರಾಮ ಪಂಚಾಯಿತಿ ಸದಸ್ಯೆ ಹೇಮಲತ, ಸುಮಲತ, ಕೆಮ್ರಾಲ್ ಶಾಲಾ ಶಿಕ್ಷಕಿ ಮಥುರಾ ಉಪಸ್ಥಿತರಿದ್ದರು.

Kinnigoli-05091405

 

Comments

comments

Comments are closed.

Read previous post:
Kinnigoli-05091404
ಅಂಗರಗುಡ್ಡೆ : ನಳಿನ್‌ಕುಮಾರ್ ಕಟೀಲು ಭೇಟಿ

 ಕಿನ್ನಿಗೋಳಿ : ಈ ವರ್ಷದ ಮಳೆಗಾಲದಲ್ಲಿ ಕೆಂಚನಕೆರೆಯ ಅಂಗರಗುಡ್ಡೆ ಶ್ರೀ ರಾಮ ಭಜನಾ ಮಂದಿರದ ಸಹಿತ ಜಿಲ್ಲೆಯ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಪೊಲೀಸ್ ಆಯುಕ್ತರಲ್ಲಿ...

Close