ಭಗವತೀ ತೀಯಾ ಸಂಘ ವಾರ್ಷಿಕ ಮಹಾಸಭೆ

ಮೂಲ್ಕಿ: ಉದ್ಯೋಗಕ್ಕಾಗಿ ಶಿಕ್ಷಣ ಎಂಬ ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಸಾಮಾಜಿಕ ಹಾಗೂ ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪೋಷಕರು ಹೆಚ್ಚಿನ ಕಾಳಜಿ ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಸಸಿಹಿತ್ಲು ಶ್ರೀ. ಭಗವತೀ ದೇವಸ್ಥಾನದ ಮೊಕ್ತೇಸರರಾದ ಶ್ರೀನಿವಾಸ ಅಪ್ಪು ಪೂಜಾರಿಯವರು ಹೇಳಿದರು.
ಅವರು ಸಸಿಹಿತ್ಲು ಶ್ರೀ ಭಗವತೀ ತೀಯಾ ಸಂಘ, ಕದಿಕೆ ಭಂಡಾರ ಮಂದಿರ, ಹಳೆಯಂಗಡಿ ಇದರ 6 ನೇ ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಸಿಹಿತ್ಲು ಶ್ರೀ. ಭಗವತೀ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವಾಮನ ಇಡ್ಯಾ ಮಾತನಾಡಿ, ಸಮಾಜಪರ ಚಟುವಟಿಕೆಗಳು ಸಂಘ ಸಂಸ್ಥೆಗಳಿಂದ ಈ ದಿನಗಳಲ್ಲಿ ವಿದ್ಯಾಭ್ಯಾಸ ಮಾಡಲು ಬಯಸುವ ಮಕ್ಕಳಿಗೆ ಪ್ರೋತ್ಸಾಹದ ಕೊರತೆಯಿಲ್ಲ, ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದು ಉತ್ತಮ ಸಾಧನೆ ಮಾಡಿ ತೋರಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಸಸಿಹಿತ್ಲು ಮೇಳದ ಪ್ರಸಿದ್ದ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಕಟೀಲು ಮೇಳದ ಯಕ್ಷಗಾನ ಕಲಾವಿದ ಮೋಹನ್ ಕುಮಾರ್ ಅಮ್ಮುಂಜೆ ಹಾಗೂ ಸಮಾಜ ಸೇವಕ ರಮೇಶ್ ಕೋಟ್ಯಾನ್‌ರವರನ್ನು ಸನ್ಮಾನಿಸಲಾಯಿತು ಹಾಗೂ ೪೦ ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಒಟ್ಟು 25000ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಸಂಘದ ಅಧ್ಯಕ್ಷರಾದ ಗೀತಾ. ಕುಮಾರ್, ಕಾರ್ಯದರ್ಶಿ ರಮೇಶ್ ಬಂಗೇರ ಹಾಗೂ ಕ್ಷೇತ್ರದ ಗುರಿಕಾರರು ಉಪಸ್ಥಿತರಿದ್ದರು.

ರಾಜೇಶ್ವರಿ ಸ್ವಾಗತಿಸಿದರು, ಜ್ಯೋತಿ ವಂದಿಸಿದರು. ರೋಹಿತ್ ಕಾರ್ಯಕ್ರಮ ನಿರೂಪಿಸಿದರು.

Kinnigoli-06091401

Bhagyavan Sanil

Comments

comments

Comments are closed.

Read previous post:
Kinnigoli-05091407
ಪುನರೂರು ವಿಪ್ರ ಸಂಪದ : ಶಿಕ್ಷಕರ ದಿನಾಚರಣೆ

 ಕಿನ್ನಿಗೋಳಿ : ಪುನರೂರು ವಿಪ್ರ ಸಂಪದದ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಪುನರೂರು ಶಾಲಾ ನಿವೃತ್ತ ಶಿಕ್ಷಕಿ ಶಾರದಾಂಭ ಅವರನ್ನು ಶುಕ್ರವಾರ ಸನ್ಮಾನಿಸಲಾಯಿತು. ಪುನರೂರು ವಿಪ್ರ ಸಂಪದ ಅಧ್ಯಕ್ಷ...

Close