ಮೂಲ್ಕಿ: ಶಿಕ್ಷಕರ ದಿನಾಚರಣೆ

ಮೂಲ್ಕಿ: ಗುರುಗಳು ನಮ್ಮ ಹೆತ್ತವರಂತೆ ಪೂಜ್ಯರೂ ಅಭಿನಂದನೀಯರೂ ಆಗಿದ್ದು ಅವರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಭಾರತೀಯ ಜೀವ ವಿಮಾ ನಿಗಮದ ಶಿವಮೊಗ್ಗ ವಿಭಾಗದ ಅಧಿಕಾರಿ ಬಾಲಚಂದ್ರ ಬಿ ಹೇಳಿದರು.
ಭಾರತೀಯ ಜೀವ ವಿಮಾ ನಿಗಮದ ಮೂಲ್ಕಿ ಶಾಖೆಯ ಸಿಬ್ಬಂದಿಗಳು, ಅಭಿವೃದ್ಧಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ಸಂಯೋಜನೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶುಕ್ರವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭ ಜೀವ ವಿಮಾ ನಿಗಮದ ಮೂಲ್ಕಿ ಶಾಖೆಯ ಸಿಬ್ಬಂದಿಗಳು, ಅಭಿವೃದ್ಧಿ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ವತಿಯಿಂದ ಲೋಬೋರವರಿಗೆ ಗೌರವಾರ್ಪಣೆ ಜರುಗಿತು.
ನಿಗಮದ ಮಂಗಳೂರು ವಿಭಾಗದ ಅಭಿವೃದ್ಧಿ ಅಧಿಕಾರಿ ವಿದ್ಯಾಧರ ಶೆಟ್ಟಿ ಶುಭಾಶಂಸನೆ ಗೈದರು. ಮೂಲ್ಕಿ ಶಾಖೆಯ ಆಡಳಿತಾಧಿಕಾರಿ ರಾಜು, ಲೆಕ್ಕ ಪರಿಶೋಧಕರಾದ ದತ್ತಾತ್ರೇಯ, ಪ್ರತಿನಿಧಿ ಸಂಘದ ಅಧ್ಯಕ್ಷ ಜೆರಾಲ್ಡ್ ಕ್ರಾಸ್ತಾ, ಅಭಿವೃದ್ಧಿ ಅಧಿಕಾರಿಗಳಾದ ಜೀವನ್ ಕುಮಾರ್, ಲಿಯೋ ತಾವ್ರೋ, ಬಿ.ಜೆ.ಪೈ, ಪೂರ್ಣೇಶ್, ಅರವಿಂದ್, ಶಿವಾನಂದ ರಾತೊಡ್, ಮುತ್ತಯ್ಯ, ನಿತ್ಯಾನಂದ, ಮೈಕಲ್ ಉಪಸ್ಥಿತರಿದ್ದರು.
ಲಿಯೋ ತಾವ್ರೋ ಸ್ವಾಗತಿಸಿದರು. ಜೀವನ್ ಕುಮಾರ್ ನಿರೂಪಿಸಿದರು.

Kinnigoli-06091403

Bhagyavan Sanil

Comments

comments

Comments are closed.

Read previous post:
Kinnigoli-06091402
ಹುಲಿವೇಷ

ಮೂಲ್ಕಿ: ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭ ಹೋಟೇಲು ಉದ್ಯಮಿ ಪ್ರಸಾದ್ ಕಾಮತ್ ಹುಲಿವೇಷದೊಂದಿಗೆ ವಿಶೇಷವಾಗಿ ಸಂಭ್ರಮಿಸಿದರು.

Close