ದಾಮಸಕಟ್ಟೆ :ಮಳೆಗೆ ಅವರಣ ಕುಸಿದು ಹಾನಿ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಮಸಕಟ್ಟೆಯಲ್ಲಿ ಭಾನುವಾರ ಮುಂಜಾನೆ ಸುರಿದ ಭಾರಿ ಮಳೆಗೆ ಚರಂಡಿಯ ನೀರು ದಾಮಸಕಟ್ಟೆಯ ಪ್ರವೀಣ್ ಸಾಲ್ಯಾನ್ ಅವರ ತೋಟಕ್ಕೆ ನುಗ್ಗಿ ಮನೆಯ ಹಿಂಬದಿಯ ಮನೆಯ ಆವರಣಗೋಡೆ ಕುಸಿದು ನಷ್ಟ ಉಂಟಾಗಿದೆ. ಒಂದು ವರ್ಷದ ಮೊದಲು ದಾಮಸಕಟ್ಟೆಯ ರಸ್ತೆಯಲ್ಲಿ ನೀರು ನಿಲ್ಲುತ್ತಿದ್ದ ಪರಿಣಾಮ ಸಮರ್ಪಕವಾದ ಚರಂಡಿ ವ್ಯವಸ್ಥೆ ಮಾಡದೆ ಅವೈಜ್ಙಾನಿಕ ರೀತಿಯಲ್ಲಿ ಕಟ್ಟಿರುವುದರಿಂದ ಜೋರು ಮಳೆ ಬಂದಾಗ ಚರಂಡಿಯಿಂದ ನೇರ ಪರಿಸರದ ಮನೆಗಳ ಆವರಣಕ್ಕೆ ನುಗ್ಗಿದೆ ಎಂದು ಪ್ರವೀಣ್ ಸಾಲ್ಯಾನ್ ತಿಳಿಸಿದ್ದಾರೆ. ಸ್ಥಳಕ್ಕೆ ಐಕಳ ಗ್ರಾ. ಪಂ. ಅಧ್ಯಕ್ಷೆ ಪದ್ಮಿನಿ ವಸಂತ್, ಉಪಾಧ್ಯಕ್ಷ ದಿವಾಕರ ಚೌಟ ಬೇಟಿ ನೀಡಿದ್ದಾರೆ.

Kinnigoli-08091407

Comments

comments

Comments are closed.

Read previous post:
Kinnigoli-08091406
ಕಟೀಲು ಮಕ್ಕಳ ಧ್ವನಿ ಸಮಾರೋಪ ಸಮಾರಂಭ

ಕಿನ್ನಿಗೋಳಿ: ಕನ್ನಡ ಮಾಧ್ಯಮದಲ್ಲಿ ಕಲಿತಾಗ ಹೆಚ್ಚಿನ ಮನೋವಿಕಾಸ ಸಾಧ್ಯ. ಮನಸ್ಸು ಅರಳಲು ಸಾಧ್ಯ. ಕಾವ್ಯ ಪರಂಪರೆಯನ್ನು ಸ್ಮರಿಸುವ ಇಂತಹ ಮಕ್ಕಳ ಧ್ವನಿಯಂತ ವೇದಿಕೆಯನ್ನು ನಾವು ಸಿದ್ದ ಪಡಿಸಿದಾಗ ಮಕ್ಕಳ...

Close