ಕಟೀಲು ಮಕ್ಕಳ ಧ್ವನಿ ಸಮಾರೋಪ ಸಮಾರಂಭ

ಕಿನ್ನಿಗೋಳಿ: ಕನ್ನಡ ಮಾಧ್ಯಮದಲ್ಲಿ ಕಲಿತಾಗ ಹೆಚ್ಚಿನ ಮನೋವಿಕಾಸ ಸಾಧ್ಯ. ಮನಸ್ಸು ಅರಳಲು ಸಾಧ್ಯ. ಕಾವ್ಯ ಪರಂಪರೆಯನ್ನು ಸ್ಮರಿಸುವ ಇಂತಹ ಮಕ್ಕಳ ಧ್ವನಿಯಂತ ವೇದಿಕೆಯನ್ನು ನಾವು ಸಿದ್ದ ಪಡಿಸಿದಾಗ ಮಕ್ಕಳ ಗ್ರಹಣ ಶಕ್ತಿ ಪ್ರೌಡತೆ ಹಂತ ಹಂತವಾಗಿ ಬೇಳೆಯುತ್ತದೆ. ಎಂದು ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಬಿ. ಎಮ್ ಶರಭೇಂದ್ರ ಸ್ವಾಮಿ ಹೇಳಿದರು. ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನ ಜಂಟೀ ಸಹಯೋಗದೊಂದಿಗೆ ಕಟೀಲು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ನಡೆದ 21ನೇ ವರ್ಷದ ಮಕ್ಕಳ ಧ್ವನಿ 2014 ಮಕ್ಕಳ ಸಾಹಿತ್ಯಿಕ ಸಾಂಸ್ಕೃತಿಕ ಸಮ್ಮೇಳನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮಂಗಳೂರು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪದವಿಪೂರ್ವ ಕಾಲೇಜಿನ ಜಂಟೀ ಸಹಯೋಗದೊಂದಿಗೆ ಕಟೀಲು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಬಾನುವಾರ ನಡೆದ ೨೧ನೇ ವರ್ಷದ ಮಕ್ಕಳ ಧ್ವನಿ 2014 ಮಕ್ಕಳ ಸಾಹಿತ್ಯಿಕ ಸಾಂಸ್ಕೃತಿಕ ಸಮ್ಮೇಳನದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.

ಇತ್ತಿಚಿನ ದಿನಗಳಲ್ಲಿ ಶಾಲೆಗಳಲ್ಲಿ ಸೃಜನಶೀಲರನ್ನಾಗಿ , ಚೈತನ್ಯವಂತರನ್ನಾಗಿ ಮಾಡುವ ಕಾವ್ಯವಾಚನ, ಕಥೆ ಬರುವಿಕೆ ಗಮಕ ವಾಚನಗಳು, ಸಾಹಿತ್ಯ ಸಂಘಗಳ ನಿಧಾನವಾಗಿ ಮಾಯವಾಗುತ್ತಿದ್ದು. ಅದನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಸಮಯ ಬಂದಿದೆ. ಎಂದು ಬೇಸರ ವ್ಯಕ್ತಪಡಿಸಿದರು.
ಸರಕಾರಿ ಉನ್ನತ ಫ್ರೌಢ ಶಾಲೆಯ ಪೈವಳಿಕೆಯ ಕು| ಶ್ರದ್ಧಾ ಎನ್ ಮಕ್ಕಳಧ್ವನಿಯ ಸಮೇನಾಧ್ಯಕ್ಷತೆ ವಹಿಸಿದ್ದರು. ಕಟೀಲು ದೇವಳದ ಮೊಕ್ತೇಸರ ಕೆ. ವಾಸುದೇವ ಆಸ್ರಣ್ಣ , ಅರ್ಚಕರಾದ ಕಮಲಾದೇವಿ ಪ್ರಸಾದ ಆಸ್ರಣ್ಣ, ಹರಿನಾರಾಯಣದಾಸ ಆಸ್ರಣ್ಣ ಶುಭಾಶಂಸನೆಗೈದರು. ಕಟೀಲು ಪ.ಪೂ.ಕಾಲೇಜಿ ಪ್ರಿನ್ಸಿಪಾಲ್ ಹಾಗೂ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಜಯರಾಮ ಪೂಂಜಾ ಉಪಸ್ಥಿತರಿದ್ದರು.
ಈ ಸಂದರ್ಭ ಮಕ್ಕಳ ಸಾಹಿತಿ ರಾಮಭಟ್ಟ ಸಜಂಗದ್ದೆ ಅವರನ್ನು ಸನ್ಮಾನಿಸಲಾಯಿತು. ಪದವಿ ಪೂರ್ವ ಫ್ರೌಢ ಶಾಲೆಗಳ ಅತ್ಯುತಮ ಶಾಲಾ ಸಂಚಿಕೆಗಳಿಗೆ ಬಹುಮಾನ ನೀಡಲಾಯಿತು.
ಸುಬ್ರಹ್ಮಣ್ಯ ಭಟ್ ನಿರ್ಚಾಲು ಸ್ವಾಗತಿಸಿ ಪುಂಡಲೀಕ ಸನ್ಮಾನಿತರ ವಿವರ ತಿಳಿಸಿದರು. ವಾಮನ ಇಡ್ಯಾ ವಂದಿಸಿದರು. ಕಟೀಲು ಪ.ಪೂ ಕಾಲೇಜು ಉಪನ್ಯಾಸಕಿ ಭಾರತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-08091406

Comments

comments

Comments are closed.

Read previous post:
Kinnigoli-08091404
ಕಟೀಲು 21ನೇ ವರ್ಷದ ಮಕ್ಕಳ ಧ್ವನಿ

ಕಿನ್ನಿಗೋಳಿ: ಎಳವೆಯಲ್ಲಿಯೇ ತಾಯಿಯಂದಿರು ಮಕ್ಕಳಿಗೆ ಸಾಹಿತ್ಯದ ಪ್ರಥಮ ಗುರುವಾಗಬೇಕು ಹಳೆಯ ಜೋಗುಳದ ಮೂಲಕ ಜಾನಪದ, ಸಾಹಿತ್ಯಭರಿತ ಪದ್ಯಗಳನ್ನು ಹಾಡಿ ಮಗುವನ್ನು ಮಲಗಿಸುವುದನ್ನು ಬಿಟ್ಟು ಮೊಬೈಲ್ ಹಾಡುಗಳನ್ನು ಉಪಯೋಗಿದಲ್ಲಿ ಮಗು...

Close