ಕಿನ್ನಿಗೋಳಿ : ಗುರುವಂದನಾ ಕಾರ್ಯಕ್ರಮ

 ಕಿನ್ನಿಗೋಳಿ : ನಮ್ಮ ದೇಶದಲ್ಲಿ ಗುರುಸಂಸ್ಕೃತಿ ಹಾಸುಹೊಕ್ಕಾಗಿದೆ. ಭಾರತೀಯ ಶಿಕ್ಷಣ ಹಿಂದಿನ ಕಾಲದದಿಂದಲೂ ಬೌದ್ದಿಕ ವಿಕಸನಕ್ಕೆ ನಾಂದಿಯಾಗಿತ್ತು. ವ್ಯಾಪರೀಕರಣದ ಈ ಯುಗದಲ್ಲಿ ಮಾನವೀಯ ಮೌಲ್ಯಯುತದ ಶಿಕ್ಷಣಕ್ಕೆ ಶಿಕ್ಷಕರು ಒತ್ತುಕೊಡಬೇಕಾಗಿದೆ. ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು
ಕಿನ್ನಿಗೋಳಿಯ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಆಶ್ರಯದಲ್ಲಿ ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆದ ಗುರುವಂದನಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.
ಮಾಜಿ ಶಾಸಕ ಸಂಸ್ಕಾರ ಭಾರತಿ ಗೌರವಾಧ್ಯಕ್ಷ ಕುಂಬಳೆ ಸುಂದರರಾವ್ ಅಭಿನಂಧನ ಭಾಷಣಗೈದರು. ಜಿ. ಪಂ. ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಕಟೀಲಿನ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ , ಅಖಿಲ ಭಾರತ ಬಿಲ್ಲವರ ಯೂನಿಯನ್‌ನ ಸಂಘಟನಾ ಕಾರ್ಯದರ್ಶಿ ಕೆ. ಟಿ. ಸುವರ್ಣ, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಈ ಸಂಧರ್ಭ ಮುಲ್ಕಿ ಮೂಡಬಿದಿರೆ ಪರಿರದ ವಿವಿಧ ಶಾಲೆಗಳ ನಿವೃತ್ತಗೊಂಡ ಹಾಗೂ ನಿವೃತ್ತಿಗೊಳ್ಳಲಿರುವ 30 ಸಾಧಕ ಶಿಕ್ಷಕರನ್ನು ಗೌರವಿಸಲಾಯಿತು.
ವಿವೇಕಾನಂಡ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಸ್ಥೆಯ ಟ್ರಸ್ಟಿ ಶ್ರೀನಿವಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶರತ್ ಶೆಟ್ಟಿ ವಂದಿಸಿದರು.

Kinnigoli-08091402

Comments

comments

Comments are closed.