ಪದ್ಮನೂರಿನಲ್ಲಿ ಅಪಾರ್ಟ್‌ಮೆಂಟ್- ವಿಲ್ಲಾಸ್ ಉದ್ಘಾಟನೆ

ಕಿನ್ನಿಗೋಳಿ: ಕಿನ್ನಿಗೋಳಿಯಂತಹ ಬೆಳೆಯುತ್ತಿರುವ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಯ ದೃಷ್ಟಿಯಿಂದ ಸಕಲ ಸೌಲಭ್ಯ ಹೊಂದಿರುವ ಮನೆಗಳ ಅವಶ್ಯಕತೆಗಳಿದ್ದು ಮಂಗಳೂರಿನ ಗ್ಲೋಬಲ್ ಕನ್ಸಟ್ರಕ್ಷನ್ ಕಂಪನಿಯು ಮಹತ್ವದ ಮೂರು ಯೋಜನೆಯನ್ನು ಈ ರೀತಿಯಾಗಿ ಕಾರ್ಯರೂಪಕ್ಕೆ ತಂದಿದೆ ಎಂದು ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ. ವಿನ್ಸೆಂಟ್ ಮೊಂತೊರೊ ಹೇಳಿದರು.
ಕಿನ್ನಿಗೋಳಿ ಸಮೀಪದ ಪದ್ಮನೂರಿನಲ್ಲಿ ಮಂಗಳೂರಿನ ಗ್ಲೋಬಲ್ ಸಂಸ್ಥೆಯ ಗ್ಲೋಬಲ್ ಹೆಬಿಟೆಟ್ ಲೇಔಟ್- ಅಪಾರ್ಟ್‌ಮೆಂಟ್ಸ್- ಗ್ಲೋಬಲ್ ಪಾರ್ಕ್, ವಿಲ್ಲಾಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು.
ವಿಶಷ ವಸತಿ ಸಮುಚ್ಛಯಗಳ ಪ್ಲೆಕ್ಸ್‌ಗಳನ್ನು ಕಿನ್ನಿಗೋಳಿ ಯುಗಪುರುಷದ ಪ್ರದಾನ ಸಂಪಾದಕ ಭುವನಾಭಿರಾಮ ಉಡುಪ ಹಾಗೂ ವಿಶೇಷವಾಗಿ ನಿರ್ಮಾಣವಾಗಲಿರುವ ಐಶಾರಾಮ ಬಂಗಲೆಗಳ ಪ್ಲೆಕ್ಸ್‌ಗಳನ್ನು ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಅನಾವರಣಗೊಳಿಸಿದರು.
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಕುಮಾರ್ , ಪಾಲುದಾರರಾದ ಉರ್ಮಿಳಾ ರಮೇಶ್ ಕುಮಾರ್, ಅರುಣ್ ಕುಮಾರ್, ಪ್ರಸಾದ್ ಬಂಗೇರ, ಹರಿಕೃಷ್ಣ ಬಂಟ್ವಾಳ, ಮಂಗಳೂರಿನ ಹೋಟೇಲ್ ಉದ್ಯಮಿ ಗಣೇಶ್ ಶೆಟ್ಟಿ ಮತ್ತಿತರರಿದ್ದರು. ಈ ಸಂದರ್ಭ ಇಂಜಿನಿಯರ್ ಡಾನ್‌ಸ್ಟನ್ ಡಿಸಿಲ್ವರನ್ನು ಗೌರವಿಸಲಾಯಿತು.
ಗ್ಲೋಬಲ್ ಪಾರ್ಕ್ ೨ಮತ್ತು ೩ ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು ಅತ್ಯಾಧುನಿಕ ಶೈಲಿ ಮತ್ತು ಸೌಲಭ್ಯದೊಂದಿಗೆ ನಿರ್ಮಾಣವಾಗಲಿವೆ ಎಂದು ಗ್ಲೋಬಲ್ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ. ರಂಗನಾಥ್ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Kinnigoli-08091408

Comments

comments

Comments are closed.

Read previous post:
Kinnigoli-08091407
ದಾಮಸಕಟ್ಟೆ :ಮಳೆಗೆ ಅವರಣ ಕುಸಿದು ಹಾನಿ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಮಸಕಟ್ಟೆಯಲ್ಲಿ ಭಾನುವಾರ ಮುಂಜಾನೆ ಸುರಿದ ಭಾರಿ ಮಳೆಗೆ ಚರಂಡಿಯ ನೀರು ದಾಮಸಕಟ್ಟೆಯ ಪ್ರವೀಣ್ ಸಾಲ್ಯಾನ್ ಅವರ ತೋಟಕ್ಕೆ ನುಗ್ಗಿ ಮನೆಯ ಹಿಂಬದಿಯ...

Close