ಕಿನ್ನಿಗೋಳಿ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಕಿನ್ನಿಗೋಳಿ ಲಯನ್ಸ್ ಹಾಗೂ ಲಯನೆಸ್ ಕ್ಲಬ್‌ಗಳ ಆಶ್ರಯದಲ್ಲಿ ಶುಕ್ರವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಕರಾಟೆ ಶಿಕ್ಷಕ ಈಶ್ವರ್ ಕಟೀಲ್, ಯೋಗ ಶಿಕ್ಷಕ ಜಯ ಎಮ್. ಶೆಟ್ಟಿ , ನಿವೃತ್ತ ಶಿಕ್ಷಕಿ ಸುಮತಿ ಭಟ್, ಎಮಿಲಿಯನ್ ಸಿಕ್ವೇರಾ ಅವರನ್ನು ಸನ್ಮಾನಿಸಲಾಯಿತು ಹಾಗೂ ೧೫ ಶಿಕ್ಷಕರನ್ನು ಗೌರವಿಸಲಾಯಿತು. ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ. ವಿನ್ಸಂಟ್ ಮೊಂತೆರೋ, ಯುಗಪುರುಷ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಲಯನ್ಸ್ ಅಧ್ಯಕ ಬರ್ಟ್‌ನ್ ಸಿಕ್ವೇರಾ, ವಲಯಾಧ್ಯಕ್ಷ ಮೆಲ್ವಿನ್ ಡಿಸೋಜ, ನಿಕಟಪೂರ್ವ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್, ಕೋಶಾಧಿಕಾರಿ ಶಾಂಭವಿ ಶೆಟ್ಟಿ , ಪುರುಷೋತ್ತಮ ಶೆಟ್ಟಿ , ಜಗದೀಶ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

Kinnigoli-08091403

Comments

comments

Comments are closed.

Read previous post:
Kinnigoli-08091402
ಕಿನ್ನಿಗೋಳಿ : ಗುರುವಂದನಾ ಕಾರ್ಯಕ್ರಮ

 ಕಿನ್ನಿಗೋಳಿ : ನಮ್ಮ ದೇಶದಲ್ಲಿ ಗುರುಸಂಸ್ಕೃತಿ ಹಾಸುಹೊಕ್ಕಾಗಿದೆ. ಭಾರತೀಯ ಶಿಕ್ಷಣ ಹಿಂದಿನ ಕಾಲದದಿಂದಲೂ ಬೌದ್ದಿಕ ವಿಕಸನಕ್ಕೆ ನಾಂದಿಯಾಗಿತ್ತು. ವ್ಯಾಪರೀಕರಣದ ಈ ಯುಗದಲ್ಲಿ ಮಾನವೀಯ ಮೌಲ್ಯಯುತದ ಶಿಕ್ಷಣಕ್ಕೆ ಶಿಕ್ಷಕರು ಒತ್ತುಕೊಡಬೇಕಾಗಿದೆ....

Close