ಮಾತೆ ಮರಿಯಮ್ಮನವರ ಜನ್ಮದಿನ (ತೆನೆ ಹಬ್ಬ)

ಮೂಲ್ಕಿ: ವಿಶ್ವದ ಪ್ರಸಿದ್ದ ವ್ಯಕ್ತಿಗಳ ಸಾಧನೆಯಲ್ಲಿ ತಾಯಿಯ ಮಾರ್ಗದರ್ಶನ ಪ್ರಥಮ ಭೂಮಿಕೆಯಾಗಿದ್ದು ತಾಯಿ ಪ್ರಥಮ ಗುರುವಾಗಿ ಜೀವನದ ಉನ್ನತಿಗೆ ದಾರಿ ದೀಪವಾದರೆ ಪ್ರಕೃತಿ ತಾಯಿಯಂತೆ ನಮ್ಮನ್ನು ರಕ್ಷಿಸುವಂತೆ ಮಾತೆ ಮರಿಯಮ್ಮ ನವರು ತಮ್ಮ ಪುತ್ರನ ಮೂಲಕ ಪ್ರಪಂಚದ ಕತ್ತಲೆಯನ್ನು ಹೋಗಲಾಡಿಸಿದ ಕಾರಣ ಭೂಮಿಯ ಆಶೀರ್ವಾದದ ಸಂಕೇತವಾದ ತೆನೆಯನ್ನು ಪವಿತ್ರೀಕರಿಸಿ ಮನೆಯಲ್ಲಿ ಕುಟುಂಬ ಸದಸ್ಯರು ಸೇರಿ ಸೇವಿಸುವ ಮೂಲಕ ಕೌಟುಂಬಿಕ ಭಾಂದವ್ಯ ವೃದ್ಧಿಗಾಗಿ ಮಾತೆ ಮರಿಯಮ್ಮನವರ ಜನ್ಮದಿನವನ್ನು ತೆನೆಹಬ್ಬವಾಗಿ ಆಚರಿಸಲಾಗುತ್ತದೆ ಎಂದು ಮಂಗಳೂರು ಜೆಪ್ಪು ಸಂತ ಜೋಸೆಫ್ ಸೆಮಿನರಿಯ ಉಪನ್ಯಾಸಕರಾದ ಫಾ.ರೊನಾಲ್ಡ್ ಸೆರಾವೋ ಹೇಳಿದರು.
ಮೂಲ್ಕಿ ಅಮಲೋದ್ಭವ ಮಾತಾ ಚರ್ಚಿನ ವತಿಯಿಂದ ಸೋಮವಾರ ನಡೆದ ತೆನೆ ಹಬ್ಬದ ಸಂದೇಶ ನೀಡಿದರು.
ಕುಟುಂಬದಲ್ಲಿ ಪ್ರಥಮ ಪ್ರಾಶಸ್ತ್ಯ ದೇವರಿಗೆ ನೀಡಬೇಕು ಎಲ್ಲಿ ಕುಟುಂಬ ಸೇರಿ ಪ್ರಾರ್ಥಿಸುತ್ತದೋ ಆ ಕುಟುಂಬ ಅಭಿವೃದ್ಧಿಯಾಗುತ್ತದೆ ಎಂದರು.
ಬಳಿಕ ಮೂಲ್ಕಿ ಚರ್ಚಿನ ಧರ್ಮ ಗುರುಗಳಾದ ವಂ.ಫಾ.ನೋರ‍್ಭಟ್ ಲೋಬೋ ಉಪಸ್ಥಿತಿಯಲ್ಲಿ ತೆನೆಗಳನ್ನು ಪವಿತ್ರೀಕರಿಸಲಾಯಿತು. ಪವಿತ್ರ ಸಭೆಯ ಮಕ್ಕಳಿಂದ ಮಾತೆ ಮರಿಯಮ್ಮನವರ ವಿಗ್ರಗಕ್ಕೆ ಪುಷ್ಪಗಳನ್ನು ಸಮರ್ಪಿಸಲಾಯಿತು. ಬಳಿಕ ಚರ್ಚು ಪಾಲನಾ ಮಂಡಳಿ ಉಪಾಧ್ಯಕ್ಷ ಜೋಯಲ್ ಹೆರಾಲ್ಡ್ ಡಿಸೋಜ ನೇತ್ರತ್ವದಲ್ಲಿನಡೆದ ಮೆರವಣಿಗೆಯಲ್ಲಿ ಚರ್ಚಿನ ವಾರ್ಡುಗಳ ಮುಖ್ಯಸ್ಥರು ತೆನೆಗಳನ್ನು ಚರ್ಚಿಗೆ ಕೊಂಡೈದು ಪೂಜೆ ಸಲ್ಲಿದ ಬಳಿಕ ತೆನೆಗಳನ್ನು ವಿತರಿಸಲಾಯಿತು ಮದ್ಯಾಹ್ನದ ಬಳಿಕ ವಾರ್ಡು ಸದಸ್ಯರಿಗೆ ಮಕ್ಕಳಿಗೆ ಸ್ಪರ್ದೆಗಳನ್ನು ಹಮ್ಮಿಕೊಳ್ಳಲಾಯಿತು.

Kinnigoli-11091405

Bhagyavan Sanil

 

Comments

comments

Comments are closed.

Read previous post:
Kinnigoli-08091416
ಶ್ರೀ ರಾಮ ಮಂದಿರದಲ್ಲಿ ಅನಂತ ಚತುರ್ದಶಿ ವೃತ

ಕಿನ್ನಿಗೋಳಿ:  ಶ್ರೀ ರಾಮ ಮಂದಿರದಲ್ಲಿ ಅನಂತ ಚತುರ್ದಶಿ ವೃತ ಪೂಜಾ ಕಾರ್ಯಕ್ರಮ ನಡೆಯಿತು.

Close