ಕಿನ್ನಿಗೋಳಿ ರೋಟರಿ ಕ್ಲಬ್ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಪ್ರಪಂಚವನ್ನೇ ಅರಿಯದ ಮಕ್ಕಳಿಗೆ ಪ್ರಪಂಚ ಜ್ನಾನ ತಿಳಿಸುವ ಶಿಕ್ಷಕರು ನಿಜವಾಗಿಯೂ ನಮ್ಮ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದ್ದಾರೆ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಹೊಂದಿದೆ ಎಂದು ಬಜಪೆ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ಪ್ರಾಂಕ್ಲಿನ್ ರೇಗೊ ಹೇಳಿದರು.
ಕಿನ್ನಿಗೋಳಿ, ಮುಲ್ಕಿ, ಬಜಪೆ, ಮತ್ತು ಪಡು ಮಾರ್ನಾಡು ರೋಟರಿ ಕ್ಲಬ್‌ಗಳು, ಕಿನ್ನಿಗೋಳಿ ಇನ್ನರ್ ವೀಲ್ ಕ್ಲಬ್ ಹಾಗೂ ರೋಟರ‍್ಯಾಕ್ಟ್ ಕ್ಲಬ್‌ಗಳ ಜಂಟಿ ಆಶ್ರಯದಲ್ಲಿ ಸೋಮವಾರ ಕಿನ್ನಿಗೋಳಿಯ ಸಹಕಾರ ಸೌಧದಲ್ಲಿ ನಡೆದ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಪನ್ಯಾಸಕರಾದ ಕೇಶವ ನಾಯ್ಕ್, ಹಾಗೂ ಶಿಕ್ಷಕಿಯರಾದ ಸುನೀತ, ಸೆಲಿನ್ ಪಿಂಟೋ ಹಾಗೂ ನಿರ್ಮಲ ಭಟ್ ಅವರನ್ನು ಸನ್ಮಾನಿಸಲಾಯಿತು
ಈ ಸಂದರ್ಭ ರೋಟರಿ ಅಧ್ಯಕ್ಷರುಗಳಾದ ವಿಲಿಯಂ ಸಿಕ್ವೇರ ಕಿನ್ನಿಗೋಳಿ, ಜೊಯಲ್ ಹೆರಾಲ್ಡ್ ಡಿಸೋಜ ಮುಲ್ಕಿ, ಮಹಮದ್ ಅಸ್ಲಮ್ ಪಡು ಮಾರ್ನಡ್, ರೋಟರಿ ವಲಯ ಸೇನಾನಿ ಶರತ್ ಶೆಟ್ಟಿ, ಕಿನ್ನಿಗೋಳಿ ರೋಟರಿ ಕಾರ್ಯದರ್ಶಿ ಗಂಗಾಧರ ಶೆಟ್ಟಿ, ಇನ್ನರ್ ವೀಲ್ ಅಧ್ಯಕ್ಷೆ ವೀಣಾ ಬಿ ಶೆಟ್ಟಿ, ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಹೆರಿಕ್ ಪಾಯಸ್ ಉಪಸ್ಥಿತರಿದ್ದರು.

Kinnigoli-10091401

Comments

comments

Comments are closed.

Read previous post:
ಮಾತೆ ಮರಿಯಮ್ಮನವರ ಜನ್ಮದಿನ (ತೆನೆ ಹಬ್ಬ)

ಮೂಲ್ಕಿ: ವಿಶ್ವದ ಪ್ರಸಿದ್ದ ವ್ಯಕ್ತಿಗಳ ಸಾಧನೆಯಲ್ಲಿ ತಾಯಿಯ ಮಾರ್ಗದರ್ಶನ ಪ್ರಥಮ ಭೂಮಿಕೆಯಾಗಿದ್ದು ತಾಯಿ ಪ್ರಥಮ ಗುರುವಾಗಿ ಜೀವನದ ಉನ್ನತಿಗೆ ದಾರಿ ದೀಪವಾದರೆ ಪ್ರಕೃತಿ ತಾಯಿಯಂತೆ ನಮ್ಮನ್ನು ರಕ್ಷಿಸುವಂತೆ...

Close