ಮೂಲ್ಕಿ: ಶಿಕ್ಷಕರ ದಿನಾಚರಣೆ

ಮೂಲ್ಕಿ: ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಅವರ ಜೀವನಕ್ಕೆ ಭದ್ರ ಬುನಾದಿಯನ್ನು ಹಾಕುವ ಶಿಕ್ಷಕರು ಕಣ್ಣಿಗೆ ಕಾಣುವ ದೇವರಂತೆ ಎಂದು ಸಿ.ಎಸ್.ಐ ಶಾಲಾ ಸಂಚಾಲಕ ಪ್ರೊ.ಸ್ಯಾಮ್ ಮಾಬೆನ್ ಹೇಳಿದರು ಅವರು ಕಾರ್ನಾಡು ಸಿ.ಎಸ್.ಐ ಪ್ರೌಢಶಾಲೆಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕಿ ಚಂದ್ರಾವತಿರವರನ್ನು ಸನ್ಮಾನಿಸಿದ ಬಳಿಕ ಮಾತನಾಡಿದರು ವಿದ್ಯಾರ್ಥಿಗಳು ಉತ್ತಮ ಗುಣನಡತೆಯನ್ನು ಮೈಗೂಡಿಸಿಕೊಂಡು ವೃತ್ತಿ ಜೀವನದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಿದಾಗ ಆಗುವ ಸಂತೋಷವೇ ಗುರುಗಳು ಕೇಳುವ ಗುರುದಕ್ಷಿಣೆ ಅದೇ ಅವರು ಅಪೇಕ್ಷಿಸುವ ಸನ್ಮಾನ ಎಂದು ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಚಂದ್ರಾವತಿ ಹೇಳಿದರು ಪ್ರೊ.ಸ್ಯಾಮ ಮಾಬೆನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಎಲಿಜಬೆತ್ ಪುಷ್ಪಲತ ಉಪಸ್ಥಿತರಿದ್ದರು ಸಹ ಶಿಕ್ಷಕಿ ಅಕ್ಷತ ಅತಿಥಿಯನ್ನು ಪರಿಚಯಿಸಿದರು ಪ್ರಜ್ಞಾ ಕಾರ‍್ಯಕ್ರಮ ನಿರೂಪಿದರು ಸ್ವಪ್ನ ಸ್ವಾಗತಿಸಿದರು ಜೆನಿಫರ್ ವಂದಿಸಿದರು.

Kinnigoli-10091402

Comments

comments

Comments are closed.

Read previous post:
Kinnigoli-10091401
ಕಿನ್ನಿಗೋಳಿ ರೋಟರಿ ಕ್ಲಬ್ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಪ್ರಪಂಚವನ್ನೇ ಅರಿಯದ ಮಕ್ಕಳಿಗೆ ಪ್ರಪಂಚ ಜ್ನಾನ ತಿಳಿಸುವ ಶಿಕ್ಷಕರು ನಿಜವಾಗಿಯೂ ನಮ್ಮ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುತ್ತಿದ್ದಾರೆ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ...

Close