ಶ್ರೀ ನಾರಾಯಣ ಗುರು 160ನೇ ಜನ್ಮ ದಿನಾಚರಣೆ

ಮೂಲ್ಕಿ: ಮಕ್ಕಳನ್ನು ಸಂಸ್ಕಾರಯುತರನ್ನಾಗಿಸಲು ತಾಯಿ ಎಳವೆಯಲ್ಲಿಯೇ ಶಿಸ್ತಿನಿಂದ ಬದುಕಲು ಕಲಿಸಿದರೆ ಮುಂದೆ ಸಮಾಜ ಸಂಘಟನೆಗಳು ಅವರನ್ನು ಅಭಿವೃದ್ಧಿ ಪಥದತ್ತ ಕೊಂಡೊಯಲು ಸಾಧ್ಯವಾಗುತ್ತದೆ ಎಂದು ದ,ಕ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು.
ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಸಂಯೋಜನೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 160ನೇ ಜನ್ಮ ದಿನಾಚರಣೆ ಪ್ರಯುಕ್ತ ನಡೆದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಗೂ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂಗೈ ವಿಶ್ವ ಕೋಶವಾಗಿರುವ ಮೊಬೈಲ್ ಇಂದು ಯುವ ಪೀಳಿಗೆಯ ಅವನತಿಗೆ ಕಾರಣವಾಗುತ್ತಿದ್ದು ಅಗತ್ಯದ ಅಂದರ್ಭ ಬಿಟ್ಟರೆ ತಮ್ಮ ವಿದ್ಯಾಬ್ಯಸದ ಅವಧಿಯಲ್ಲಿ ಮೊಬೈಲ್ ಉಪಯೋಗಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು ಎಂದರು.
ಜಾನಪದ ಸಂಶೋದಕ ಮುದ್ದು ಮೂಡುಬೆಳ್ಳೆಯವರು ದಿಕ್ಸೂಚಿ ಭಾಷಣ ಮಾಡಿ, ಶ್ರೀ ನಾರಾಯಣ ಗುರುಗಳು ಹಿಂದುಳಿದ ಸಮಾಜವನ್ನು ಸಂಘಟಿಸಿ ವಿದ್ಯೆ ನೀಡಿ ಅಹಿಂಸಾತ್ಮಕವಾಗಿ ನಡೆಸಿದ ಚಳುವಳಿಯಿಂದ ವಿಶ್ವ ಮಾನ್ಯರಾದರು. ಅವರ ತತ್ವ ಆದರ್ಶ ಸರ್ವಕಾಲಿಕವಾಗಿ ಪ್ರಸ್ತುತ ಎಂದರು.
ಈ ಸಂದರ್ಭ ಮೂಲ್ಕಿ ನಗರ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಸಮಾಜದ ಸದಸ್ಯರಾದ ಉಮೇಶ್ ಮಾನಂಪಾಡಿ, ರಾಧಿಕಾ ಕೋಟ್ಯಾನ್,ವಿಮಲಾ ಪೂಜಾರಿ,ಕುಸುಮಾ ಕೋಟ್ಯಾನ್ ಮತ್ತು ಯೋಗೀಶ್ ಕೋಟ್ಯಾನ್ ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ಇಂಗ್ಲಿಷ್ ಮತ್ತು ಕನ್ನಡ ಭಾಷಣ ಮತ್ತು ಪ್ರಭಂದ ಸ್ಪರ್ದೆಯಲ್ಲಿ ಜಿಲ್ಲೆಯಲ್ಲಿ ಆಯ್ಕೆಯಾಗಿ ರಾಜ್ಯಮಟ್ಟ ಪ್ರತಿನಿಧಿಸಲಿರುವ ಶ್ರೀ ನಾರಾಯಣ ಗುರು ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿ ಲಿಖಿತ್‌ನನ್ನು ಸನ್ಮಾನಿಸಲಾಯಿತು. ಅತ್ಯಧಿಕ ಅಂಕಗಳಿಸಿದ ಸ್ವಾತಿ ಸುವರ್ಣ,ಪ್ರತಿಕ್ಷಾ ಸುವರ್ಣ ಚಿತ್ರಾಪು,ಸುಷ್ಮಿತಾ ಕವತ್ತಾರು, ರಕ್ಷಿತ್ ಬಪ್ಪನಾಡು, ಸಂಜನಾ ಕೋಟ್ಯಾನ್ ಕಿಲ್ಪಾಡಿ ಯವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಸಂದರ್ಭ ಪ್ರ್ರಾಥಮಿಕ ಶಾಲೆಯಿಂದ ಉನ್ನತ ಪದವಿ ಶಿಕ್ಷಣದ ವರೆಗೆ ಸುಮಾರು ೫ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಯಿತು. ಈ ಸಂದರ್ಭ ಅತಿಥಿಗಳಾಗಿ ಮೂಲ್ಕಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರಿಶ್ಚಂದ್ರ ಪಿ.ಸಾಲ್ಯಾನ್, ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಸಂಚಾಲಕ ಎಚ್.ವಿ.ಕೋಟ್ಯಾನ್,ಮಹಿಳಾ ಮಂಡಳಿ ಅಧ್ಯಕ್ಷೆ ಸರಸ್ವತಿ ರಾಘು ಸುವರ್ಣ,ಸೇವಾದಳದ ಅಧ್ಯಕ್ಷ ಸತೀಶ್ ಅಂಚನ್, ಸಂಘದ ಗೌರವ ಕಾರ್ಯದರ್ಶಿ ರಮೇಶ್ ಕೊಕ್ಕರಕಲ್,ಕೋಶಾಧಿಕಾರಿ ಪ್ರಕಾಶ ಸುವರ್ಣ, ಯೋಗೀಶ್ ಕೋಟ್ಯಾನ್ ಚಿತ್ರಾಪು ವೇದಿಕೆಯಲ್ಲಿದ್ದರು.
ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥಿಸಿದರು.ಹರಿಶ್ಚಂದ್ರ ಸಾಲ್ಯಾನ್ ಸ್ವಾಗತಿಸಿದರು. ಜಯಶ್ರೀ ಮತ್ತು ನರೇಂದ್ರ ಕೆರೆಕಾಡು ನಿರೂಪಿಸಿದರು. ರಮೇಶ್ ಕೊಕ್ಕರಕಲ್ ವಂದಿಸಿದರು. ಚಿತ್ರ:ಎಂಯುಎಲ್_ಸೆಪ್೮_೧ ಮೂಲ್ಕಿ ನಗರ ಪಂಚಾಯತಿ ಸದಸ್ಯರಾಗಿ ಆಯ್ಕೆಯಾದ ಸಮಾಜದ ಸದಸ್ಯರಾದ ಉಮೇಶ್ ಮಾನಂಪಾಡಿ, ರಾಧಿಕಾ ಕೋಟ್ಯಾನ್,ವಿಮಲಾ ಪೂಜಾರಿ,ಕುಸುಮಾ ಕೋಟ್ಯಾನ್ ಮತ್ತು ಯೋಗೀಶ್ ಕೋಟ್ಯಾನ್ ರವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

Kinnigoli-11091401Bhagyavan Sanil

Comments

comments

Comments are closed.

Read previous post:
Kinnigoli-10091405
ಒಂದು ದಿನದ ಜೀವನ ಮೌಲ್ಯ ಶಿಕ್ಷಣ ಶಿಭಿರ

ಮೂಲ್ಕಿ: ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀ ಜಿತಕಾಮಾನಂದ ಸ್ವಾಮೀಜಿ ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಭಾನುವಾರ ನಡೆದ ಒಂದು ದಿನದ ಜೀವನ ಮೌಲ್ಯ ಶಿಕ್ಷಣ ಶಿಭಿರ ಉದ್ಘಾಟಿಸಿದರು....

Close