ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸರ್ವಕಾಲಕ್ಕೂ ಪ್ರಸ್ತುತ

ಮೂಲ್ಕಿ: ಸಮಾಜದಲ್ಲಿ ಅಸ್ಪರ್ಶತೆ ಬಡತನ ತಾಂಡವವಾಡುತ್ತಿರುವ ದಿನಗಳಲ್ಲಿ ಸಂಘಟನೆ ಮತ್ತು ಶಿಕ್ಷಣ ಕ್ರಾಂತಿಯ ಮೂಲಕ ಕಷ್ಟದಲ್ಲಿರುವ ಜನರಿಗೆ ದಾರಿ ದೀಪವಾದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಸರ್ವಕಾಲಕ್ಕೂ ಪ್ರಸ್ತುತ ಎಂದು ಚಿತ್ರಾಪು ಶ್ರೀ ವಿಠೋಭ ಬಾಲಲೀಲಾ ಭಜನಾ ಮಂದಿರದ ಗೌರವಾಧ್ಯಕ್ಷ ಬಾಲಚಂದ್ರ ಸನಿಲ್ ಹೇಳಿದರು
ಮೂಲ್ಕಿ ಕೆ.ಎಸ್.ರಾವ್ ನಗರದ ಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದಲ್ಲಿ ಜರುಗಿದ ಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆ ,ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಪೊರ್ಕೋಡಿ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಟ್ರಸ್ಟಿ ಶೇಖರ ಅಮೀನ್ ಭಜನಾ ಜ್ಯೋತಿ ಉದ್ಘಾಟಿಸಿದರು.ಉಡುಪಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ವಿದ್ಯಾರ್ಥಿ ವೇತನ ವಿತರಿಸಿದರು. ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಉಪಾಧ್ಯಕ್ಷ ಬಿ.ಕೆ.ನಾಗೇಶ್ ಪೂಜಾರಿ,ಸಂಘದ ಅಧ್ಯಕ್ಷ ರಾಘವ ಎ ಸುವರ್ಣ, ಗೌ.ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಎಸ್.ಕೋಟ್ಯಾನ್, ಕೋಶಾಧಿಕಾರಿ ಅಶೋಕ್ ಅಮೀನ್,ಮಹಿಳಾ ಮಂಡಲದ ಅಧ್ಯಕ್ಷೆ ಸುಮತಿ ಅತಿಥಿಗಳಾಗಿದ್ದರು. ರಾಘವ ಸುವರ್ಣ ಸ್ವಾಗತಿಸಿದರು.ಜನಾರ್ದನ ಬಂಗೇರ ನಿರೂಪಿಸಿದರು,ಹರಿಶ್ಚಂದ್ರ ಕೋಟ್ಯಾನ್ ವಂದಿಸಿದರು.

Kinnigoli-11091409 Kinnigoli-11091410Bhagyavan Sanil

 

Comments

comments

Comments are closed.

Read previous post:
Kinnigoli-11091408
ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆ

ಮುಲ್ಕಿ: ಬ೦ಟ್ವಾಳದ ಬಿಲ್ಲವ ಬಾ೦ಧವರ ವತಿಯಿ೦ದ ಬ೦ಟ್ವಾಳ ಪುರಸಭೆ ಸದಸ್ಯ ವಾಸು ಪೂಜಾರಿಯವರು ಮುಲ್ಕಿಯ ಬಿಲ್ಲವ ಸ೦ಘದಲ್ಲಿ ಬಿಲ್ಲವ ಶ್ರೀ ನಾರಾಯಣ ಗುರುಗಳ ಜನ್ಮ ದಿನಾಚರಣೆಯ ಸ೦ದರ್ಭದಲ್ಲಿ ಜರಗಿದ...

Close