ಕಿನ್ನಿಗೋಳಿ ಅನಂತ ಪ್ರಕಾಶ ಪುರಸ್ಕಾರ

ಕಿನ್ನಿಗೋಳಿ: ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಕಿನ್ನಿಗೋಳಿಯ ಅನಂತಪ್ರಕಾಶ ಸಂಸ್ಥೆ ಪುರಸ್ಕಾರವನ್ನು ನೀಡುತ್ತಾ ಬಂದಿದ್ದು, ಈ ಬಾರಿ ಮುಂಬಯಿ ಕನ್ನಡಿಗರಾದ ಡಾ| ವಿಶ್ವನಾಥ ಕಾರ್ನಾಡ ಅವರಿಗೆ ಅನಂತಪ್ರಕಾಶ ಪುರಸ್ಕಾರ ನೀಡಲಿದೆ. ಕಾರ್ನಾಡರು ಮೂರು ದಶಕಗಳಷ್ಟು ಕಾಲ ಶಿಕ್ಷಣ ವೃತ್ತಿಯೊಂದಿಗೆ ಸಾಹಿತ್ಯ ರಚನೆಯನ್ನು ಮಾಡುತ್ತಾ ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.
ಇಂಗ್ಲೀಷ್, ಕನ್ನಡ ಮತ್ತು ಇತಿಹಾಸ ವಿಷಯಗಳಲ್ಲಿ ಎಂ.ಎ.’ತುಳುವರ ಮುಂಬಯಿ ವಲಸೆ’ಯ ಕುರಿತು ಪಿ.ಎಚ್.ಡಿಯನ್ನು ಮುಂಬಯಿ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಹಿಂದಿಯಲ್ಲಿ ರತ್ನ ಪದವಿಯನ್ನು ಪಡೆದಿದ್ದಾರೆ. ಸಂದರ್ಶನ, ಸನ್ಯಾಸಿ ಈರ್ಷೆ, ಭಸ್ಮಾಸುರ, ’ಎರಡನೆಯ ಮುಖ’ ಆಯ್ದ, ಕೃತಿ ಸಂಕಲನಗಳ ಕಾರ್ನಾಡರ ಕಥಾ ಸಾಹಿತ್ಯ, ’ಅಂತರ’ ಕಾವ್ಯ ಸಂಚಯ (ಸಾಹಿತ್ಯ ಲೇಖನಗಳ ಕೃತಿ) ’ಕಾಲಚಕ್ರ’ ಮರಾಠಿಯಿಂದ, ’ನೀಲಕಮಲ’ ಹಿಂದಿಯಿಂದ ’ಪತ್ರಗಳಲ್ಲಿ ಕಂಡ ಲೋಹಿಯಾ’ ಇಂಗ್ಲೀಷ್‌ನಿಂದ ಅನುವಾದ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಅರ್ಥಪೂರ್ಣ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಡಾ. ಪ್ರತಿಭಾರೇಯವರ ’ಯಾಜ್ಞಸೇನಿ’ಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಈ ಪುರಸ್ಕಾರವು ಪುರಸ್ಕೃತರ ಕುರಿತಾದ ’ಅಭಿನಂದನ’ ಕೃತಿ ಹಾಗೂ ರೂ. 10,000 ನಗದು ಬಹುಮಾನವನ್ನು ಒಳಗೊಂಡಿದ್ದು ಇದೇ ನವೆಂಬರ್ ತಿಂಗಳ ಮೊದಲ ವಾರದಲ್ಲಿ ನೀಡಲಾಗುವುದು ಎಂದು ಅನಂತಪ್ರಕಾಶ ಸಂಸ್ಥೆಯ ನಿರ್ದೇಶಕ ಕೊಡೆತ್ತೂರು ಸಚ್ಚಿದಾನಂದ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Kinnigoli-12091402

Comments

comments

Comments are closed.

Read previous post:
Kinnigoli-12091401
ಎಚ್. ನಾರಾಯಣ ಸನಿಲ್ – ಶ್ರದ್ಧಾಂಜಲಿ ಸಭೆ

ಮುಲ್ಕಿ: ನಾರಾಯಣ ಸನಿಲ್ ರವರು ಅಪರೂಪದ ವ್ಯಕ್ತಿತ್ವವುಳ್ಳ ಮೇರುವ್ಯಕ್ತಿ. ಹಳೆಯಂಗಡಿಯ ಹೆಸರನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಸನಿಲ್ ರವರಿಗೆ ಸೇರಿದ್ದು. ಇಂತವರ ಆದರ್ಶವನ್ನು ಪಾಲಿಸಿ ಎಂದು ನಿವೃತ್ತ ಕನ್ನಡ...

Close