ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್

ಕಿನ್ನಿಗೋಳಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಜಂಟೀ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಳದ ಸಹಕಾರದೊಂದಿಗೆ ಕಟೀಲಿನಲ್ಲಿ ನಡೆದ ಮಂಗಳೂರು ಉತ್ತರ ವಲಯ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಟೀಲು, ಬೋಂದೇಲ್ ಹಾಗೂ ಬಜಪೆ ಶಾಲಾ ತಂಡಗಳು ಪ್ರಶಸ್ತಿ ಪಡೆದವು.
ಉದ್ಘಾಟನಾ ಸಮಾರಂಭದಲ್ಲಿ ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮಂಗಳೂರು ಉತ್ತರ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕರಾದ ರಘುನಾಥ ಶೆಟ್ಟಿ ಹಾಗೂ ತಾಲೂಕು ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷ ದಯಾನಂದ ಮಾಡ ಎಕ್ಕಾರು, ಪ್ರೌಢಶಾಲಾ ಮುಖ್ಯ ಶಿಕ್ಷಕ ಕೆ. ವಿ. ಶೆಟ್ಟಿ, ದೈಹಿಕ ಶಿಕ್ಷಕ ಪುಂಡಲೀಕ ಕೊಠಾರಿ ಉಪಸ್ಥಿತರಿದ್ದರು.
ಕಟೀಲು ದೇವಳ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ವಿಜೇತರಿಗೆ ಬಹುಮಾನ ವಿತರಿಸಿದರು.
ಪ್ರಾಥಮಿಕ ಶಾಲಾ: ಬಾಲಕರು:
ಪ್ರಥಮ: ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆ, ಕಟೀಲು.
ದ್ವಿತೀಯ: ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೋಂದೇಲ್, ಮಂಗಳೂರು.
ಪ್ರಾಥಮಿಕ ಶಾಲಾ ಬಾಲಕಿಯರು:
ಪ್ರಥಮ: ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆ, ಕಟೀಲು.
ದ್ವಿತೀಯ: ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಬೋಂದೇಲ್, ಮಂಗಳೂರು.
ಪ್ರೌಢಶಾಲಾ ವಿಭಾಗ: ಬಾಲಕರು:
ಪ್ರಥಮ: ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಬಜ್ಪೆ.
ದ್ವಿತೀಯ: ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಕಟೀಲು
ಪ್ರೌಢಶಾಲಾ ವಿಭಾಗ: ಬಾಲಕಿಯರು:
ಪ್ರಥಮ: ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಕಟೀಲು
ದ್ವಿತೀಯ: ಸೈಂಟ್ ಜೋಸೆಫ್ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ, ಬಜ್ಪೆ.

Kinnigoli-12091403 Kinnigoli-12091404 Kinnigoli-12091405 Kinnigoli-12091406

Comments

comments

Comments are closed.

Read previous post:
Kinnigoli-12091402
ಕಿನ್ನಿಗೋಳಿ ಅನಂತ ಪ್ರಕಾಶ ಪುರಸ್ಕಾರ

ಕಿನ್ನಿಗೋಳಿ: ಸಾಹಿತ್ಯ, ಶಿಕ್ಷಣ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಕಿನ್ನಿಗೋಳಿಯ ಅನಂತಪ್ರಕಾಶ ಸಂಸ್ಥೆ ಪುರಸ್ಕಾರವನ್ನು ನೀಡುತ್ತಾ ಬಂದಿದ್ದು, ಈ ಬಾರಿ ಮುಂಬಯಿ ಕನ್ನಡಿಗರಾದ ಡಾ| ವಿಶ್ವನಾಥ ಕಾರ್ನಾಡ ಅವರಿಗೆ...

Close