ಕಿನ್ನಿಗೋಳಿ ಮುದ್ದುಕೃಷ್ಣ ಸ್ಪರ್ಧೆ

ಕಿನ್ನಿಗೋಳಿ: ಕಿನ್ನಿಗೋಳಿ ಯುಗಪುರುಷ, ರೋಟರಿ ಕ್ಲಬ್, ರೋಟರ‍್ಯಾಕ್ಟ್ , ಇನ್ನರ್‌ವೀಲ್, ಸೌತ್ ಕೆನರಾ ಪೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ, ಯಕ್ಷಲಹರಿ, ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಕೃಷ್ಣಜನ್ಮಾಷ್ಟಮಿಯ ಅಂಗವಾಗಿ ಮುದ್ದು ಕೃಷ್ಣ ವೇಷ ಸ್ಪರ್ಧೆ ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ನಡೆಯಿತು. ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ವಲಯ ೪ರ ಸಹಾಯಕ ಗರ್ವನರ್ ಸತೀಶ್ ಬೋಳಾರ್, ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಇನ್ನರ್ ವೀಲ್ ಅಧ್ಯಕ್ಷೆ ವೀಣಾ ಶೆಟ್ಟಿ , ಸೌತ್ ಕೆನರಾ ಪೋಟೋಗ್ರಾಫರ‍್ಸ್ ಅಸೋಸಿಯೇಶನ್ ಮುಲ್ಕಿ ವಲಯ ಕಾರ್ಯದರ್ಶಿ ಕೆ. ಬಿ. ಸುರೇಶ್, ಎಮ್. ಬಾಲಕೃಷ್ಣ ಶೆಟ್ಟಿ , ಪಿ. ಸತೀಶ್ ರಾವ್, ಮತ್ತಿತರರು ಉಪಸ್ಥಿತರಿದ್ದರು.

Kinnigoli-13091409

Comments

comments

Comments are closed.

Read previous post:
Kinnigoli-13091408
ಶಿಮಂತೂರು ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ: ವಿದ್ಯಾರ್ಥಿಗಳು ದುಶ್ಚಟಗಳಿಂದ ಬಲಿಯಾಗದೆ ಯೋಗ ಹಾಗೂ ಆರೋಗ್ಯದ ನಿಯಮಗಳನ್ನು ಪಾಲಿಸಬೇಕು, ಮದ್ಯಪಾನ, ಮಾದಕವಸ್ತು ವಿರುದ್ಧ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಹಿರಿಯ ಸಾಹಿತಿ ಉಮೇಶ್ ರಾವ್...

Close