ಪರೋಪಕಾರಿ ಜೀವನ ರೂಢಿಸಿಕೊಳ್ಳಿ

ಮೂಲ್ಕಿ: ಇಂದಿನ ಕಲಿಯುಗದಲ್ಲಿ ಜ್ಞಾನದ ಜೊತೆಗೆ ಸದ್ಗುಣ ಸಂಪನ್ನತೆ ಬೆಳಸುವ ಮೌಲ್ಯಾಧಾರಿತ ಶಿಕ್ಷಣವನ್ನು ಮಕ್ಕಳಿಗೆ ಕಲಿಸಬೇಕಾಗಿದೆ. ಜೀವನದಲ್ಲಿ ಪರೋಪಕಾರಿಯಾಗಿ,ಅಹಿಂಸಾ ತತ್ವಗಳನ್ನು ಪಾಲಿಸಿಕೊಂಡು ಜಗತ್ತಿಗೆ ಮಾದರಿಯಾಗುವ ಜೀವನದ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಆಶೀರ್ವಚನ  ನೀಡಿದರು. ಅವರು ಪದ್ಮಶ್ರೀ ಚಾರಿಟೇಬಲ್ ಟ್ರಸ್ಟ್ ಕೊಲೆಕಾಡಿ ಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು. ಚಾರಿಟೇಬಲ್ ಟ್ರಸ್ಟ್‌ನ ವೇದಮೂರ್ತಿ ಕೊಲೆಕಾಡಿ ವಾದಿರಾಜ ಉಪಾದ್ಯಾಯ ದಂಪತಿಗಳು ಸ್ವಾಮೀಜಿಯವರನ್ನು ಸ್ವಾಗತಿಸಿದರು. ಇದೇ ಸಂದರ್ಭ ವೇದಿಕೆಯಲ್ಲಿ ಕೊಲೆಕಾಡಿ ಶಶಿಕಲಾ ಉಪಾದ್ಯಾಯ , ದೇಂದಡ್ಕ ಕ್ಷೇತ್ರದ, ಅರ್ಚಕ ಸುಬ್ರಹ್ಮಣ್ಯ ಭಟ್, ಶ್ರೀನಿವಾಸ ಭಟ್, ಪ್ರಾಣೇಶ ದೇಂದಡ್ಕ, ಮತ್ತಿತರರು ಉಪಸ್ಥಿತರಿದ್ದರು.

Kinnigoli-13091401Puneethakrishna 

 

Comments

comments

Comments are closed.

Read previous post:
Kinnigoli-12091404
ತಾಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್

ಕಿನ್ನಿಗೋಳಿ: ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಸಂಯುಕ್ತ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಜಂಟೀ ಆಶ್ರಯದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಳದ...

Close