ಶಿಮಂತೂರು ಸ್ವಾಸ್ಥ್ಯ ಸಂಕಲ್ಪ

ಕಿನ್ನಿಗೋಳಿ: ವಿದ್ಯಾರ್ಥಿಗಳು ದುಶ್ಚಟಗಳಿಂದ ಬಲಿಯಾಗದೆ ಯೋಗ ಹಾಗೂ ಆರೋಗ್ಯದ ನಿಯಮಗಳನ್ನು ಪಾಲಿಸಬೇಕು, ಮದ್ಯಪಾನ, ಮಾದಕವಸ್ತು ವಿರುದ್ಧ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು ಎಂದು ಹಿರಿಯ ಸಾಹಿತಿ ಉಮೇಶ್ ರಾವ್ ಎಕ್ಕಾರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಹಾಗೂ ಶಿಮಂತೂರು ಶಾರದಾ ಪ್ರೌಢ ಶಾಲೆಯ ಆಶ್ರಯದಲ್ಲಿ ಶನಿವಾರ ಶಾಲಾ ಸಭಾಂಗಣದಲ್ಲಿ ನಡೆದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದುಶ್ಚಟಗಳ ಪ್ರಭಾವದಿಂದ ಕೌಟುಂಬಿಕ ಕಲಹಗಳು ಆರ್ಥಿಕ ಅವನತಿಯ ಜೊತೆಗೆ ವಿದ್ಯಾಬ್ಯಾಸ ಮತ್ತು ಆರೋಗ್ಯದಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ವಿದ್ಯಾರ್ಥಿಗಳು ಎಳವೆಯಲ್ಲಿ ತಿಳಿದುಕೊಂಡಲ್ಲಿ ಮುಂದೆ ಸದೃಡ ಸಮಾಜದ ಉದಯ ಸಾಧ್ಯವಾಗಲಿದೆ ಎಂದರು.
ಶಾಲಾ ಕಾರ್ಯದರ್ಶಿ ಧರ್ಮಾನಂದ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಭುವನಾಭಿರಾಮ ಉಡುಪ, ಶಾಲಾ ಮುಖ್ಯ ಶಿಕ್ಷಕ ಪ್ರಥ್ವಿರಾಜ್ ಎಸ್. ಕರಿಕೆ, ಕಿನ್ನಿಗೋಳಿ ವಲಯ ಜನಜಾಗೃತ ವೇದಿಕೆಯ ವಲಯಾಧ್ಯಕ್ಷ ಕರುಣಾಕರ ಶೆಟ್ಟಿ, ಧ.ಗ್ರಾ. ಯೋಜನೆಯ ಕಿನ್ನಿಗೋಳಿ ವಲಯ ಮೇಲ್ವಿಚಾರಕ ಸತೀಶ್, ಒಕ್ಕೂಟದ ಅಧ್ಯಕ್ಷೆ ಹೇಮಲತಾ, ಸೇವಾ ಪ್ರತಿನಿಧಿ ಶ್ರೀಕಲಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-13091408

Comments

comments

Comments are closed.

Read previous post:
Kinnigoli-13091407
“ಅಭೇದ್ಯ” ಕೃತಿ ಬಿಡುಗಡೆ.

ಕಿನ್ನಿಗೋಳಿ : ಕಿನ್ನಿಗೋಳಿಯ ಯುಗಪುರುಷದಲ್ಲಿ ಗುರುವಾರ ಸಾಹಿತಿ ಪಿ.ವಿ.ಪ್ರದೀಪ್‌ಕುಮಾರ್‌ರವರ "ಅಭೇದ್ಯ" ಕೃತಿಯನ್ನು ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಅನಾವರಣಗೊಳಿಸಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ...

Close