ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

ಮೂಲ್ಕಿ: ವಿದ್ಯಾರ್ಥಿಗಳ ಆಸಕ್ತಿ ಹಾಗೂ ಶೃಜನಶೀಲತೆ ಹೆಚ್ಚಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ವಿದ್ಯೆ ಹಾಗೂ ಆರೋಗ್ಯ ರಕ್ಷಣೆಗೆ ಲಯನ್ಸ್ ಹೆಚ್ಚಿನ ಸೇವೆ ನೀಡುತ್ತಿದೆ ಎಂದು ಲಯನ್ಸ್ ಪ್ರಾಂಥ್ಯಾಧ್ಯಕ್ಷ ಹರೀಶ್ ಪುತ್ರನ್ ಹೇಳಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರಾಪು ಮತ್ತು ಸ.ಹಿ.ಪ್ರಾ.ಶಾಲೆ ಮಾನಂಪಾಡಿ ಇವರ ಸಂಯೋಜನೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆಯನ್ನು ನಡೆಸಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಮೂಲ್ಕಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಬಂಗೇರ ಮುಖ್ಯ ಅತಿಥಿಗಳಾಗಿ ನ.ಪಂ ಸದಸ್ಯರುಗಳಾದ ಕುಸುಮ, ಉಮೇಶ್ ಮಾನಂಪಾಡಿ, ಯೋಗೀಶ್ ಕೋಟ್ಯಾನ್, ಸಂದೀಪ್ ಸುವರ್ಣ, ರಘುನಾಥ್ ಹಾಗೂ ಪ್ರತಿಭಾ ಕಾರಂಜಿ ನೋಡೆಲ್ ಅಧಿಕಾರಿ ಚಂದ್ರಕಲಾ ನಿಕಟಪೂರ್ವ ಸಿ.ಆರ್.ಪಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ವಿನೋದ ಚಿತ್ರಾಪು ಜ್ಯೋತಿ ಡಿ ಮಾನಂಪಾಡಿ, ಬಾಲಚಂದ್ರ ಸನಿಲ್ ,ಮಂಜುನಾಥ್ ಸನಿಲ್ ಚಿತ್ರಾಪು, ಜಯಶೀಲ ಶೆಟ್ಟಿ ಉಪಸ್ಥಿತರಿದ್ದರು ಮುಖ್ಯ ಶಿಕ್ಷಕಿ ಪ್ರೇಮ ಕುಮಾರಿ ಸ್ವಾಗತಿಸಿ ಮಾನಂಪಾಡಿ ಮುಖ್ಯ ಶಿಕ್ಷಕಿ ಶೋಭಾ ಯು ವಂದಿಸಿದರು ಮೂಡಬಿದಿರೆ ಕೋಟೆ ಬಾಗಿಲು ಸುಧಾಕರ ಸಾಲ್ಯಾನ್ ಬಿ. ಕಾರ್ಯಕ್ರಮ ನಿರೂಪಿಸಿದರು.

Kinnigoli-15091404

Bhagyavan Sanil

Comments

comments

Comments are closed.

Read previous post:
Kinnigoli-15091403
ಮೂಲ್ಕಿ ಅಭಿವೃದ್ಧಿಗೆ ಜಿಲ್ಲಾಧಿಕಾರಿಗೆ ನಿಯೋಗ

ಮೂಲ್ಕಿ: ಮೂಲಭೂತ ಸೌಕರ್ಯದಿಂದ ವಂಚಿತಗೊಂಡ ಮೂಲ್ಕಿ ಸಮಸ್ಯೆಗಳಿಗೆ ಸ್ಪಂದಿಸಲು ಸಂಘ ಸಂಸ್ಥೆಗಳ ನಿಯೋಗದೊಂದಿಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮೂಲ್ಕಿಯಲ್ಲಿ ವಿಶೇಷ ಸಭೆಯನ್ನು ಸಂಯೋಜಿಸಲು ಶುಕ್ರವಾರ ಕಾರ್ನಾಡು ರೋಟರಿ...

Close