ಶ್ರದ್ಧಾಂಜಲಿ – ಎಚ್ ನಾರಾಯಣ ಸನಿಲ್

ಮುಲ್ಕಿ: ಹಳೆಯಂಗಡಿಯಂತಹ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಫ್ರೌಢಶಾಲೆ, ಪ್ರಥಮ ದಜೆ ಕಾಲೆಜು ಸ್ತಾಪನೆ, ಪಿ ಸಿ ಎ ಸಹಕಾರಿ ಬ್ಯಾಂಕ್ ಸ್ತಾಪನೆ ಮೂಲಕ ಶಿಕ್ಷಣ ಹಾಗೂ ಸಹಕಾರಿ ರಂಗದಲ್ಲಿ ಸಾಧನೆ ಮಾಡಿದಂತಹ ಹಳೆಯಂಗಡಿಯ ನಾರಾಯಣ ಸನಿಲ್ ರವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದು ಅವರ ಆದರ್ಶಗಳನ್ನು ಜೀವದಲ್ಲಿ ಅಳವಡಿಸಿಕೊಳ್ಳುವಂತೆ ರಾಜ್ಯ ಯುವಜನ ಮತ್ತು ಮೀನುಗಾರಿಕಾ ಸಚಿವ ಕೆ ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿಯ ಬಿಲ್ಲವ ಸಂಘದ ಸಭಾಗ್ರಹದಲ್ಲಿ ಎಚ್ ನಾರಾಯಣ ಸನಿಲ್ ರ ಶ್ರದ್ಧಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ, ಜಾನಪದ ವಿದ್ವಾಂಸ ಡಾ ಗಣೇಶ್ ಅಮೀನ್ ಸಂಕಮಾರ್, ಲಯನ್ಸ್ ಪ್ರಾಂತ್ಯಾಧ್ಯಕ್ಷ ಹರೀಶ್ ಪುತ್ರನ್, ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಬಂಗೇರ, ಪಂಜದ ಗುತ್ತು ಶಾಂತರಾಮ ಶೆಟ್ಟಿ, ಸೂರ್ಯ ಕುಮಾರ್ ಹಳೆಯಂಗಡಿ, ಸದಾಶೀವ ಸಾಲ್ಯಾನ್ ಪೈಯೊಟ್ಟು, ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಪೂರ್ಣಿಮ ಮಧು, ಪಡಪಣಂಬೂರು ಪಂಚಾಯತ್ ಉಪಾಧ್ಯಕ್ಷೆ ಕುಸುಮಾ ಚಂದ್ರಶೇಖರ್ ಮತ್ತಿತರರು ಉಪಸ್ತಿತರಿದ್ದರು.

Kinnigoli-15091405

Prakash Suvarna

Comments

comments

Comments are closed.

Read previous post:
Kinnigoli-15091404
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

ಮೂಲ್ಕಿ: ವಿದ್ಯಾರ್ಥಿಗಳ ಆಸಕ್ತಿ ಹಾಗೂ ಶೃಜನಶೀಲತೆ ಹೆಚ್ಚಿಸಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದ್ದು ವಿದ್ಯೆ ಹಾಗೂ ಆರೋಗ್ಯ ರಕ್ಷಣೆಗೆ ಲಯನ್ಸ್ ಹೆಚ್ಚಿನ ಸೇವೆ ನೀಡುತ್ತಿದೆ ಎಂದು ಲಯನ್ಸ್...

Close